ಶನಿವಾರಸಂತೆ, ಮೇ 23: ಶನಿವಾರಸಂತೆಯಲ್ಲಿ ಮದುವೆ ಮುಗಿಸಿ ಗೋಣಿಮರೂರು ಗ್ರಾಮದ ಈರ್ವರು ತಮ್ಮ ಮೋಟಾರ್ ಸೈಕಲ್ನಲ್ಲಿ (ಕೆಎ 42- ಎಸ್-0922)ನಲ್ಲಿ ತಮ್ಮ ಗ್ರಾಮಕ್ಕೆ ಬುಧವಾರ ತೆರಳುತ್ತಿರುವಾಗ ಮಾಲಂಬಿ ಗ್ರಾಮದ ಕೂಡು ರಸ್ತೆ ತಿರುವಿನ ಬಳಿ ಎದುರುಗಡೆಯಿಂದ ಬಂದ ಕಾರು (ಕೆಎ-01 ಎಂಎಸ್-9936) ಬೈಕ್ಗೆ ಡಿಕ್ಕಿಪಡಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗೋಣಿಮರೂರು ಗ್ರಾಮದ ಸುನಿಲ್ ಹಾಗೂ ನವೀನ್ ಕುಮಾರ್ ಶನಿವಾರಸಂತೆಯಲ್ಲಿ ತಮ್ಮ ಸಂಬಂಧಿಕರ ಮದುವೆ ಮುಗಿಸಿ ಮೋಟಾರ್ ಬೈಕ್ನಲ್ಲಿ ತಮ್ಮ ಗ್ರಾಮಕ್ಕೆ ತೆರಳುತ್ತಿರುವಾಗ ಮಾಲಂಬಿ ಗ್ರಾಮದ ಕೂಡುರಸ್ತೆ ತಿರುವಿನ ಬಳಿ ಅವಘಡ ಸಂಭವಿಸಿದೆ. ಬೈಕ್ ಚಾಲಕ ಸುನಿಲ್ ಅವರ ಹಣೆಯ ಭಾಗಕ್ಕೆ, ಎಡತೊಡೆಯ ಭಾಗಕ್ಕೆ ಪೆಟ್ಟಾಗಿದ್ದು, ನವೀನ್ ಕುಮಾರ್ ಅವರ ಎಡಗಾಲಿನ ಮಂಡಿಗೆ ಗಾಯವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನವೀನ್ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ನಂಜುಂಡೇಗೌಡ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.