ಮಡಿಕೇರಿ, ಮೇ 22: ನಗರದ ಶ್ರೀ ಕೋಟೆ ಮಹಾಗಣಪತಿ ದೇವರಿಗೆ ದಸರಾ ಮಂಟಪ ಸಮಿತಿಯಿಂದ ಚಿನ್ನದ ಕಿರೀಟ ಸಮರ್ಪಣೆಯ ವಾರ್ಷಿಕೋತ್ಸವ ಅಂಗವಾಗಿ ಇಂದು ವಿಶೇಷ ಪೂಜೆಯೊಂದಿಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಈ ಪ್ರಯುಕ್ತ ದೇವರಿಗೆ ಅಭಿಷೇಕ, ನಾರೀಕೇಳ ಸೇವೆ, ಗಣಹೋಮ, ಮಹಾಪೂಜೆ ಸಹಿತ ದೈವಿಕ ಕೈಂಕರ್ಯ ನೆರವೇರಿಸ ಲಾಯಿತು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ, ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಗಳ ಪದಾಧಿಕಾರಿಗಳು, ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದದೊಂದಿಗೆ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ದೇವರಿಗೆ ವಿಶೇಷ ಅಲಂಕಾರ ಸೇವೆ ಜರುಗಿತು.