ಮಡಿಕೇರಿ, ಮೇ 22: ಪ್ರಸಕ್ತ (2019-20) ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (6-8ನೇ ತರಗತಿಗಳ) ವೃಂದದ ಖಾಲಿ ಹುದ್ದೆಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯು ತಾ. 25 ಮತ್ತು 26 ರಂದು ನಗರದ ಸಂತ ಮೈಕಲರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ನಿಗದಿಗೊಂಡಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಾ. 25 ರಂದು ಬೆಳಿಗ್ಗೆ 10.30 ರಿಂದ 1 ಗಂಟೆಯವರೆಗೆ ಸಾಮಾನ್ಯ ಪತ್ರಿಕೆ, ಮಧ್ಯಾಹ್ನ 2.30 ಗಂಟೆಯಿಂದ 5.30 ಗಂಟೆಯವರೆಗೆ ಆಂಗ್ಲ ಭಾಷೆ ಹಾಗೂ ಮೇ, 26 ರಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಗಣಿತ ಮತ್ತು ವಿಜ್ಞಾನ, ಸಮಾಜ ಪಾಠಗಳು ಹಾಗೂ ಮಧ್ಯಾಹ್ನ 2.30 ಗಂಟೆಯಿಂದ 4.30 ರವರೆಗೆ ಭಾಷಾ ಸಾಮಥ್ರ್ಯ ಪತ್ರಿಕೆಯ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಮ್ಮ ಪ್ರವೇಶ ಪತ್ರದೊಂದಿಗೆ ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನು ಬಳಕೆ ಮಾಡಲು ಮಾತ್ರ ಅವಕಾಶವಿದ್ದು ಬೇರೆ ಯಾವದೇ ವಸ್ತುಗಳಿಗೆ ಅವಕಾಶವಿರುವದಿಲ್ಲ ಎಂದು ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ, ಜಿಲ್ಲಾ ಸಾರ್ವಜಿನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೆರಿಗ್ರಿನ್ ಎಸ್. ಮಚ್ಚಾಡೋ ತಿಳಿಸಿದ್ದಾರೆ.