ಸುಂಟಿಕೊಪ್ಪ, ಮೇ 22: ದ್ವಿಚಕ್ರ ಸವಾರರ ವಾಹನ ದಾಖಲಾತಿ ತಪಸಾಣೆ ಮತ್ತು ಹೆಲ್ಮೆಟ್ ಧರಿಸದ ಸವಾರರಿಗೆ ದಂಡ ವಿಧಿಸಲಾಯಿತು.
ಪಟ್ಟಣದ ಹೃದಯಭಾಗದ ಕನ್ನಡ ವೃತ್ತದ ಬಳಿಯಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿ ದ್ವಿಚಕ್ರ ವಾಹನಗಳ ತಪಾಸಣೆ ಕೈಗೊಂಡಿದ್ದು ಹೆಲ್ಮೆಟ್ ಧರಿಸದೆ, ದಾಖಲಾತಿಗಳು ಇಲ್ಲದೆ ಇರುವ ದ್ವಿಚಕ್ರ ವಾಹನಗಳ ಸವಾರರಿಗೆ ದಂಡವನ್ನು ವಿಧಿಸಲಾಯಿತು. ಈ ಸಂದರ್ಭ ಮೂವತ್ತಕ್ಕೂ ಮಿಕ್ಕಿ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಲಾಯಿತು.