ಮಡಿಕೇರಿ, ಮೇ 22: ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಶ್ರೀ ಧರ್ಮಶಾಸ್ತಾವು ಅಯ್ಯಪ್ಪ ದೇವಾಲಯ ವಾರ್ಷಿಕೋತ್ಸವ ಈಗಾಗಲೇ ಆರಂಭವಾಗಿದ್ದು, ತಾ. 28ರ ರವರೆಗೆ ನಡೆಯಲಿದೆ. ತಾ. 23 ರಂದು (ಇಂದು) ಬೆಳಿಗ್ಗೆ 7 ರಿಂದ ಮಧ್ಯಾಹ್ನ 12.45ರ ವರೆಗೆ ವಿವಿಧ ಪೂಜೆ ಅಭಿಷೇಕ, ಮಧ್ಯಾಹ್ನ ಮಹಾ ಮಂಗಳಾರತಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಭದ್ರಕಾಳಿದೇವಿಗೆ ಮಹಾಪೂಜೆ, ದೀಪಾರಾಧನೆ ಹಾಗೂ ಅನ್ನದಾನ ನೆರವೇರಲಿದೆ.