ಕೂಡಿಗೆ, ಮೇ 22 : ಬಸವೇಶ್ವರ - ದಂಡಿನಮ್ಮ ದೇವಾಲಯ ಸಮಿತಿಯ ವತಿಯಿಂದ ಗ್ರಾಮ ದೇವತೆ ಹಬ್ಬದ ಅಂಗವಾಗಿ ಪ್ರಥಮ ಆಚರಣೆಯಾಗಿ ಬಸವೇಶ್ವರ ದೇವರ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಮೆರವಣಿಗೆ ಮಂಗಳ ವಾದ್ಯ ಮದ್ದು ಗುಂಡುಗಳ ಪ್ರದರ್ಶನದೊಂದಿಗೆ ಸಾಗಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಸೋಮಶೇಖರ್, ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ಸೇರಿದಂತೆ ಸಮಿತಿಯ ನಿರ್ದೇಶಕರುಗಳು ಹಾಜರಿದ್ದರು.