ಮಡಿಕೇರಿ, ಮೇ 22: ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ, ಕಲೆಯ ಬೆಳವಣಿಗೆಗಾಗಿ ‘ಕೊಡವ ಸಾಹಿತ್ಯ, ಸಾಂಸ್ಕøತಿಕ ಗ್ರಾಮ’ ನಿರ್ಮಾಣದ ಯೋಜನೆಯನ್ನು ರೂಪಿಸಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ. ಈ ಯೋಜನೆಗಾಗಿ 10 ಎಕರೆ ಸರಕಾರಿ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಅಕಾಡೆಮಿಯ ವಿಶೇಷ ಸಭೆ ನಿರ್ಣಯ ಕೈಗೊಂಡಿದೆ.
ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನೂತನ ಯೋಜನೆಯ ಕುರಿತು ಚರ್ಚಿಸಲಾಯಿತು. ಕೊಡವ ಭಾಷಿಕ ಜನಾಂಗದ ಕಲೆಯನ್ನು ಪ್ರತಿಬಿಂಬಿಸುವ ಮುಂದುಮನೆ, ಐನ್‍ಮನೆ, ಕೊಡವ ಮ್ಯೂಸಿಯಂ ಸೇರಿದಂತೆ ಕೊಡವ ಸಂಸ್ಕøತಿಗೆ ಪೂರಕವಾದ ಯೋಜನೆಗಳನ್ನು ಅಳವಡಿಸಿಕೊಳ್ಳಲು 10 ಎಕರೆ ಭೂಮಿಯ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಬೇಡಿಕೆಯನ್ನು ವಿಶೇಷವಾಗಿ ಪರಿಗಣಿಸುವಂತೆ ಸರಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮೂಲಕ ಹೊರತಂದಿರುವ ಕೊಡವ ಹೊಸ ವರ್ಷಾರಂಭದ ವಿಶೇಷ ಸಂಚಿಕೆ ‘ಪೊಂಗುರಿ’ ಯನ್ನು ಅನಾವರಣಗೊಳಿಸಲಾಯಿತು.
ಅಕಾಡೆಮಿ ಸದಸ್ಯರುಗಳಾದ ಆಪಟ್ಟಿರ ಟಾಟುಮೊಣ್ಣಪ್ಪ, ಬೀಕಚಂಡ ಬೆಳ್ಯಪ್ಪ, ಚಂಗುಲಂಡ ಸೂರಜ್, ತೋರೆರ ಎಂ. ಮುದ್ದಯ್ಯ, ಅಜ್ಜಮಾಡ ಪಿ.ಕುಶಾಲಪ್ಪ, ಕುಡಿಯರ ಶಾರದ, ಹಂಚೆಟ್ಟಿರ ಮನುಮುದ್ದಪ್ಪ, ಗಣಪತಿ ಹೆಚ್.ಎ, ಹಂಚೆಟ್ಟಿರ ಫ್ಯಾನ್ಸಿಮುತ್ತಣ್ಣ, ಬೊಳ್ಳಜಿರ ಬಿ.ಅಯ್ಯಪ್ಪ, ಆಂಗೀರ ಕುಸುಮ್, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ‘ಪೊಂಗುರಿ’ ಸಂಪಾದಕ ಚಂಗುಲಂಡ ಸೂರಜ್ ಹಾಗೂ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸಭೆಯಲ್ಲಿ ಉಪಸ್ಥಿತರಿದ್ದರು.