ನಾಪೆÇೀಕ್ಲು, ಮೇ. 22: ನಾಪೆÇೀಕ್ಲು - ಪಾರಾಣೆ ರಸ್ತೆ ಅಪೂರ್ಣ ಕಾಮಗಾರಿಯಿಂದಾಗಿ ಅಪಘಾತ ಭೀತಿ ಸೃಷ್ಟಿಯಾಗಿದೆ.
ಕಡಂಗದಿಂದ ಪಾರಾಣೆಗಾಗಿ ನಾಪೆÇೀಕ್ಲು ಸಂಪರ್ಕಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಕಳೆದ ಆರು ತಿಂಗಳ ಹಿಂದೆಯೇ ಮೋರಿ, ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ಅದರಂತೆ ಕಡಂಗದಿಂದ ಪಾರಾಣೆ ಕೂಡುರಸ್ತೆವರೆಗೆ ಮರುಡಾಂಬರೀಕಣ ಮಾಡಲಾಗಿದೆ. ಉಳಿದಂತೆ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಬೇತು ಗ್ರಾಮದ ಮೂರು ಕಡೆಗಳಲ್ಲಿ ರಸ್ತೆಗೆ ಅಳವಡಿಸಲಾಗಿರುವ ಮೋರಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವದರಿಂದ ಅಪಘಾತದ ಭೀತಿ ಉಂಟಾಗಿದೆ ಎನ್ನುತ್ತಾರೆ ಸಾರ್ವಜನಿಕರು. ಅರ್ಧ ರಸ್ತೆಯಲ್ಲಿ ಗುಂಡಿ ತೋಡಿ ಬಿಡಲಾಗಿದೆ. ಮಳೆಯ ನೀರು ಈ ಗುಂಡಿಯಲ್ಲಿ ಸಂಗ್ರಹವಾಗುವದರಿಂದ ವಾಹನ ಚಾಲಕರಿಗೆ ರಸ್ತೆಯಾವದು, ಗುಂಡಿಯಾವದು ಎಂದು ತಿಳಿಯದಂತಾಗಿದೆ. ಈಗಾಗಲೇ ಹಲವಾರು ವಾಹನಗಳು ಇಲ್ಲಿ ಸಿಲುಕಿಕೊಂಡು ಅಪಾಯದಿಂದ ಪಾರಾಗಿರುವದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುವ ಸೂಚನೆಯಿದ್ದು, ಮಳೆಗಾಲ ಆರಂಭಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸುವ ಅಥವಾ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಸಂಬಂಧಿಸಿದವರು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮೋರಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮಳೆಯ ನೀರು ಗುಂಡಿಯಲ್ಲಿ ಸಂಗ್ರಹಗೊಳ್ಳುವದರಿಂದ ಶಾಲಾ ಕಾಲೇಜು ಮಕ್ಕಳು ಮತ್ತು ಸಾರ್ವಜನಿಕರಿಗೆ ನಡೆದಾಡಲು ರಸ್ತೆಯಾವದು ಎಂದು ತಿಳಿಯದ ಪರಿಸ್ಥಿತಿ ಉಂಟಾಗುತ್ತದೆ. ಸಂಬಂಧಿಸಿದವರು ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಬೇತು ನಿವಾಸಿ ಕುಟ್ಟಂಜ್ಜೆಟ್ಟಿರ ಪೂಣಚ್ಚ ಮನವಿ ಮಾಡಿದ್ದಾರೆ. -ಪಿ.ವಿ.ಪ್ರಭಾಕರ್