ಮಡಿಕೇರಿ, ಮೇ 22: ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಅಜ್ಜಿಕುಟ್ಟಿರ ಬೋಪಣ್ಣ ನೇಮಕಗೊಂಡಿದ್ದಾರೆ. ಈ ಹಿಂದೆ ಕೊಲಿಜಿಯಂ ಬೋಪಣ್ಣ ಸೇರಿದಂತೆ ಇತರರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ಶಿಫಾರಸು ಮಾಡಿತ್ತು. ಈ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರಕಾರ ಕೇಳಿತ್ತು. ಇದೀಗ ಕೊಲಿಜಿಯಂ ಸಲ್ಲಿಸಿದ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ನೀಡಿದ್ದು, ಬೋಪಣ್ಣ ಅನಿರುದ್ಧ್ ಬೋಸ್, ಬಿ.ಆರ್. ಗವೈ, ಸೂರ್ಯಕಾಂತ್ ಸೇರಿದಂತೆ ಒಟ್ಟು 31 ಮಂದಿ ನ್ಯಾಯಾಧೀಶರುಗಳನ್ನು ನೇಮಕ ಮಾಡಲಾಗಿದೆ.