ಮಡಿಕೇರಿ, ಮೇ 22: ಕಳೆದ ಎರಡೂವರೆ ತಿಂಗಳಿನಿಂದ ಭಾರತದಲ್ಲಿ ತೀವ್ರ ಕುತೂಹಲ ಮೂಡಿಸಿರುವ 17ನೇ ಲೋಕಸಭಾ ಚುನಾವಣೆಯ ಫಲಿತಾಂಶವು ತಾ. 23 ರಂದು (ಇಂದು) ಪ್ರಕಟಗೊಳ್ಳಲಿದೆ. ಆ ಮೂಲಕ ದೇಶದ ರಾಜಕಾರಣದಲ್ಲಿ ಹಲವಷ್ಟು ಬದಲಾವಣೆಯೊಂದಿಗೆ, ಕರ್ನಾಟಕದ ರಾಜಕಾರಣದಲ್ಲಿಯೂ ಅನಿರೀಕ್ಷಿತ ಸ್ಥಾನಪಲ್ಲಟದ ಮಾತುಗಳು ಕೇಳಿಬರುವಂತಾಗಿದೆ.ದೇಶದ 543 ಲೋಕಸಭಾ ಸ್ಥಾನಗಳಲ್ಲಿ 272 ಸ್ಥಾನಗಳನ್ನು ಗೆಲ್ಲುವ ಪಕ್ಷ ಅಥವಾ ಮೈತ್ರಿ ಬಣಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್ಡಿಎ ಒಕ್ಕೂಟ ಮರಳಿ ಅಧಿಕಾರ ಹಿಡಿಯುವ ತವಕದಲ್ಲಿದೆ.
ಇನ್ನೊಂದೆಡೆ ಕಾಂಗ್ರೆಸ್ ನಾಯಕತ್ವದ ಯುಪಿಎ ಹಾಗೂ ಮಹಾಘಟ್ ಬಂಧನ್ ಸೇರಿ ಶತಾಯಗತಾಯ ಬಿಜೆಪಿ ಒಕ್ಕೂಟ ವಿರುದ್ಧ ಆಡಳಿತ ಸೂತ್ರ ಹಿಡಿಯುವತ್ತ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿರುವದು ಮೇಲ್ನೋಟಕ್ಕೆ ಗೋಚರಿಸುವ ಅಂಶವಾಗಿದೆ.
ಆದರೆ, ದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಹಾಗೂ ಯುಪಿಎಯೊಂದಿಗಿನ ಇತರ ಪಕ್ಷಗಳ ಮಹಾಘಟ್ ಬಂಧನ್ ಹೊರತಾಗಿ ತೃತೀಯ ಶಕ್ತಿಗಳ ಆಟ ನಡೆಯುವ ಯಾವದೇ ಲಕ್ಷಣ ಗೋಚರಿಸುತ್ತಿಲ್ಲ. ಈಗಾಗಲೇ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಬಹುಮತ ಪಡೆಯುವ ಲಕ್ಷಣ ವ್ಯಕ್ತಗೊಂಡಿದ್ದರೂ, ಅದುವೇ ವಾಸ್ತವವೆಂದು ಇತರರು ಒಪ್ಪಿಕೊಂಡಿಲ್ಲ.
ಹೀಗಾಗಿ ಈ ಸಮೀಕ್ಷೆಯು ಎನ್ಡಿಎ ಒಕ್ಕೂಟದ ಗೆಲವಿಗೆ ಸಮೀಪವಿದ್ದರೂ, ಇತರ ವಿರೋಧ ಪಕ್ಷಗಳ ಫಲಿತಾಂಶದಲ್ಲಿ ಏರಿಳಿತಗಳಿದ್ದರೆ ಯಾವದೇ ಕ್ಷಣದಲ್ಲಿ ಅನಿರೀಕ್ಷಿತ ತಿರುವುಗಳು ರಾಷ್ಟ್ರ ರಾಜಕಾರಣದಲ್ಲಿ ಪಡೆದುಕೊಳ್ಳಬಹುದು
ಹಿಡಿಯುವ ಸಂಭವವಿದ್ದರೆ, 80 ಶಾಸಕರ ಬಲದ ಕಾಂಗ್ರೆಸ್ ಹಾಗೂ 37 ಶಾಸಕರ ಜೆಡಿಎಸ್ ಮೈತ್ರಿ ಸರಕಾರದೊಳಗಿನ ಸಂಬಂಧ ಮುರಿದು ಬೀಳುವ ಆತಂಕ ಎದುರಾಗಲಿದೆ.
ಹೀಗಾಗಿ ಪ್ರಸಕ್ತ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯೊಂದಿಗೆ, ಕರ್ನಾಟಕ ಮಾತ್ರವಲ್ಲದೆ ಮಧ್ಯಪ್ರದೇಶ, ರಾಜಸ್ತಾನಗಳಲ್ಲಿಯೂ ಅಚ್ಚರಿಯ ಬೆಳವಣಿಗೆ ಎದುರಾಗಲಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ ಎಂಬದು ಸ್ಪಷ್ಟ.
-ಶ್ರೀಸುತ