ಮಡಿಕೇರಿ, ಮೇ 22: ಕಳೆದ ವರ್ಷದ ಮಳೆಗಾಲದಲ್ಲಿ ಕೊಡಗಿನ ಇತಿಹಾಸದಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪದೊಂದಿಗೆ, ನೂರಾರು ಮಂದಿ ತಮ್ಮ ಮನೆ ಮಠ, ಆಸ್ತಿ ಪಾಸ್ತಿ ಕಳೆದುಕೊಂಡಿದ್ದರೂ ಇದುವರೆಗೆ ನಿಖರವಾಗಿ, ಯಾರೊಬ್ಬರಿಗೂ ಪರಿಪೂರ್ಣ ನೆರವು ಅಥವಾ ಮನೆಗಳನ್ನು ಕಲ್ಪಿಸಲಾಗಿಲ್ಲ. ಬದಲಾಗಿ ರಾಜ್ಯ ಸರಕಾರದಿಂದ ನಿರ್ಧಿಷ್ಟವಾಗಿ ಯಾವದೇ ಪರಿಹಾರ ಹಣ ಜಿಲ್ಲಾಡಳಿತ ಮುಖಾಂತರ ಫಲಾನುಭವಿಗಳಿಗೆ ಕಲ್ಪಿಸಲಾಗುತ್ತಿಲ್ಲ. ಬದಲಾಗಿ ನೇರವಾಗಿ ಫಲಾನುಭವಿಗಳ ಖಾತೆಗೆ ಸರಕಾರ ಹಣ ಸಂದಾಯದಲ್ಲಿ ತೊಡಗಿದೆ ಎಂಬದು ಖಾತರಿಯಾಗಿದೆ.ಮಾತ್ರವಲ್ಲದೆ ಈ ಹಿಂದೆ ಜಿಲ್ಲಾಡಳಿತ ಮನೆಗಳನ್ನು ಕಳೆದು ಕೊಂಡಿರುವದಾಗಿ ಪ್ರಕಟಿಸಲಾಗಿದ್ದ 840 ಮಂದಿಯ ಕುಟುಂಬಗಳಿಗೂ, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬದಲಾಗಿ ಮೈಸೂರಿನ ರಾಜೀವ್ ಗಾಂಧಿ ಗ್ರಾಮೀಣ ಪುನರ್ವಸತಿ ನಿಗಮದಿಂದ ಒಂದಿಷ್ಟು ಸಂತ್ರಸ್ತರ ಕುಟುಂಬಗಳಿಗೆ ತಲಾ ರೂ. 9.98 ಲಕ್ಷ ವೆಚ್ಚದಲ್ಲಿ ಮನೆಗಳ ನಿರ್ಮಾಣ ಕೈಗೊಳ್ಳಲಾಗಿದೆ.
ಈ ಪ್ರಕಾರ ಮಾದಾಪುರ ಬಳಿಯ ಜಂಬೂರು ತೋಟಗಾರಿಕಾ ಕ್ಷೇತ್ರದ 50 ಎಕರೆ ಪ್ರದೇಶದಲ್ಲಿ ಮೊದಲ ಹಂತದ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅಂತೆಯೇ ಮಡಿಕೇರಿ ಬಳಿ ಕರ್ಣಂಗೇರಿ ಹಾಗೂ ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿ ಬಾಣೆಯಲ್ಲಿ ಕೆಲಸ ನಡೆಯುತ್ತಿದೆ. ಮಾದಾಪುರ ಬಳಿ ‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ನಿಗಮದಿಂದ 318 ಮನೆಗಳನ್ನು ಕಟ್ಟಲು ಸರಕಾರದಿಂದ ಆದೇಶಿಸಲಾಗಿದೆ. ಈ ಪೈಕಿ ಪ್ರಸಕ್ತ 111 ಮನೆಗಳು ಮಾತ್ರ ತಲೆಯೆತ್ತಿದೆ. ಹೀಗಿದ್ದರೂ ಈ ಮನೆಗಳಿಗೆ ಕಿಟಕಿ - ಬಾಗಿಲು ಸಹಿತ ಯಾವದೇ ಮೂಲಭೂತ ವ್ಯವಸ್ಥೆ ಆಗಿಲ್ಲ. ಕೇವಲ ಒಂದು ಹಂತಕ್ಕೆ ಕಟ್ಟಡ ಕೆಲಸ ಮುಗಿದಿದೆ.
ಇನ್ನುಳಿದ ಮನೆಗಳಿಗೆ ಈಗಷ್ಟೆ ಅಡಿಪಾಯದ ಕಾಮಗಾರಿ ಮುಂದು ವರಿದಿದೆ. ಮೈಸೂರಿನ ರಾಜೀವ್ ಗಾಂಧಿ ಗ್ರಾಮೀಣ ಪುನರ್ವಸತಿ ನಿಗಮದ ಅಧಿಕಾರಿ ಶ್ರೀನಿವಾಸ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಈಗಾಗಲೇ ಕಾಮಗಾರಿ ಮುಕ್ತಾಯ ಹಂತದಲ್ಲಿರುವ 110 ಮನೆಗಳನ್ನು ಜೂನ್ ಅಂತ್ಯದೊಳಗೆ, ಮೂಲ ಭೂತ ಸೌಕರ್ಯ ಸಹಿತ ಫಲಾನು ಭವಿಗಳಿಗೆ ಹಂಚಿಕೆ ಮಾಡಲು ಕ್ರಮ ವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಉಳಿದ ಮನೆಗಳನ್ನು ಜುಲೈ ಕಡೆಯ ವಾರದಲ್ಲಿ ಆದಷ್ಟು ಪೂರ್ಣಗೊಳಿಸುವದಾಗಿ ಆಶಯ ಹೊರಗೆಡವಿದ್ದಾರೆ. ಮಾದಾಪುರ ಬಳಿ ನಿರ್ಮಾಣ
(ಮೊದಲ ಪುಟದಿಂದ) ಭೂಕುಸಿತ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮದ ಅಗತ್ಯವಿದೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಂಬಂಧಿಸಿದವರ ಗಮನ ಸೆಳೆದಿದ್ದು, ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಪ್ರವಾಹದೊಂದಿಗೆ ಇನ್ನೊಂದಿಷ್ಟು ಸಮಸ್ಯೆ ಎದುರಾಗಲಿದೆ.
ಮಳೆಗಾಲದಲ್ಲಿ ಸ್ಥಗಿತ : ಮೇಲ್ಸೇತುವೆ ಕಾಮಗಾರಿ ಯಥಾ ಪ್ರಕಾರ ನಡೆಯುತ್ತಿದೆ. ಮಳೆಗಾಲ ಆರಂಭವಾಗುವವರೆಗೂ ಕಾಮಗಾರಿ ನಡೆಸಲಾಗುವದು. ಮಳೆಗಾಲದಲ್ಲಿ ಸ್ಥಗಿತಗೊಳಿಸಿ ಮಳೆಗಾಲ ಮುಗಿದ ಬಳಿಕ ಮತ್ತೆ ಆರಂಭಿಸಲಾಗುವದು. ಸೇತುವೆ ಕೆಳಗಡೆ ಯಾವದೇ ಸಮಸ್ಯೆ ಉದ್ಭವಿಸುವದಿಲ್ಲ. ಕೆಳಗಿನ ರಸ್ತೆಯನ್ನು ಅಗಲೀಕರಿಸಲಾಗಿದೆ. ಸಂಚಾರಕ್ಕೆ ಯಾವದೇ ಸಮಸ್ಯೆ ಉಂಟಾಗುವದಿಲ್ಲ. ಸಮಸ್ಯೆಯಾಗದಂತೆ ಕಾಮಗಾರಿ ನಿರ್ವಹಿಸುತ್ತಿದ್ದೇವೆ ಎಂದು ಕಾಮಗಾರಿಯ ಪ್ರಾಜೆಕ್ಟ್ ಮ್ಯಾನೇಜರ್ ಮಹೀಂದ್ರ ಬಾಬು ತಿಳಿಸಿದ್ದಾರೆ. - ಕೆ.ಡಿ. ಸುನಿಲ್