ನಾಪೆÇೀಕ್ಲು, ಮೇ 22: ಕೊಡವ ಕುಲಶಾಸ್ತ್ರ ಅಧ್ಯಯನದ ಪ್ರಕಾರ ಕೊಡವ ಜನಾಂಗವನ್ನು ಸಂವಿಧಾನದ ಬುಡಕಟ್ಟು ಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೂಕ್ತ ಕ್ರಮವಹಿಸೇಕು ಎಂದು ನಾಪೋಕ್ಲು ಕೊಡವ ಸಮಾಜ ಆಗ್ರಹಿಸಿ ನಿರ್ಣಯ ಕೈಗೊಂಡಿದೆ.

ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಜದ ಆಡಳಿತ ಮಂಡಳಿ ಯಲ್ಲಿ ಕೈಗೊಂಡಿರುವ ಕೆಲವು ನಿರ್ಣಯಗಳ ಕುರಿತು ಸಮಾಜದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಮಂಡಳಿ ಪ್ರಮುಖರು ನೀಡಿದರು. ಗೋಷ್ಠಿ ಯಲ್ಲಿ ಮಾತನಾಡಿದ ಮನುಮುಪ್ಪ್ಪ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಕೊಡವ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಅದರ ನೈಜ ವರದಿಯಂತೆ ಕೊಡಗಿನ ಮೂಲ ನಿವಾಸಿಗಳಾದ ಕೊಡವ ರನ್ನು ಬುಡಕಟ್ಟು ಸ್ಥಾನಮಾನದ ಪಟ್ಟಿಗೆ ಸೇರಿಸಬೇಕು ಎಂದರು. ಕೊಡವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸು ತ್ತಿದೆ. ಕೊಡವ ಭಾಷೆ ಅಳಿವಿನಂಚಿನಲ್ಲಿದೆ. ವಿಶ್ವದಲ್ಲಿಯೇ ಹೆಸರು ವಾಸಿಯಾಗಿರುವ ಕೊಡವರ ಸಂಸ್ಕøತಿ, ಪದ್ಧತಿ - ಪರಂಪರೆ, ಆಚಾರ - ವಿಚಾರ ಇವಗಳನೆಲ್ಲಾ ರಕ್ಷಿಸುವ ಜವಾಬ್ದಾರಿ ಸರಕಾರದ ಮೇಲಿದೆ ಎಂದರು.

ನಾಪೆÇೀಕ್ಲು ಕೊಡವ ಸಮಾಜದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಮುತ್ತಪ್ಪ 25 ವರ್ಷಗಳ ಹಿಂದೆ ದಾನಿಗಳ, ಜನಪ್ರತಿನಿಧಿಗಳ ಸಹಕಾರ ದಿಂದ ಆರಂಭಿಸಲಾದ ಸಮಾಜ ಇಂದು ಎಲ್ಲಾ ಸವಲತ್ತುಗಳನ್ನು ಹೊಂದಿದೆ. 45 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಸಭಾಂಗಣ ನಿರ್ಮಾಣ ಗೊಳ್ಳುತ್ತಿದೆ. ಏಕ ಕಾಲಕ್ಕೆ ಮೂರು ಸಮಾರಂಭವನ್ನು ನಡೆಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. 40 ಲಕ್ಷ ರೂ. ವೆಚ್ಚದಲ್ಲಿ ಶಾಸಕರ ಮತ್ತು ಸರಕಾರದ ಸಹಕಾರದಿಂದ ನಾಪೆÇೀಕ್ಲು ಪಟ್ಟಣ ದಿಂದ ಸಮಾಜದವರೆಗೆ ವಿಶಾಲ ವಾದ ರಸ್ತೆ ನಿರ್ಮಿಸಲಾಗಿದೆ. ಈ ವ್ಯಾಪ್ತಿಗೆ ಸಂಬಂಧಪಟ್ಟಂತೆ ನಶಿಸುತ್ತಿ ರುವ ಕಲೆ, ಸಂಸ್ಕøತಿಯನ್ನು ಬೆಳೆಸುವ ಉದ್ದೇಶದಿಂದ ಅಂತರ ಗ್ರಾಮ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.

ಮದ್ಯ ಬಳಕೆಗೆ ಕಡಿವಾಣ

ಕೊಡವ ಮದುವೆಶಾಸ್ತ್ರದ ನೀರ್‍ಎಡ್‍ಪೊ (ಗಂಗಾ ಪುಜೆ) ಸಂದರ್ಭ ಅಮ್ಮತ್ತಿ ಕೊಡವ ಸಮಾಜ ಮದ್ಯ ನಿಷೇಧದಂತಹ ದಿಟ್ಟ ನಿರ್ಧಾರ ಕೈಗೊಂಡಿರುವದನ್ನು ನಾಪೋಕ್ಲು ಸಮಾಜದಲ್ಲಿಯೂ ಅಳವಡಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮನುಮುತ್ತಪ್ಪ ತಿಳಿಸಿದರು.

ಇದೀಗ ಮೇ ಅಂತ್ಯದವರೆಗೆ ಮದ್ಯ ಬಳಕೆಗೆ ಸಂಜೆ 6 ಗಂಟೆಯ ತನಕ ಅವಕಾಶ ನೀಡಲಾಗುವದು. ಜೂನ್ ತಿಂಗಳಿನಿಂದ ಗಂಗಾ ಪೂಜೆ ಸಂದರ್ಭ ಸಂಪೂರ್ಣವಾಗಿ ಮದ್ಯ ಬಳಕೆಗೆ ನಿಷೇಧಕ್ಕೆ ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ಯಿತ್ತರು.

ಮುಕ್ತ ಅವಕಾಶ : ಸಮಾಜದ ಸಭಾಂಗಣವನ್ನು ಯಾವದೇ ಜಾತಿ-ಧರ್ಮದ ಬೇಧವಿಲ್ಲದೆ ಎಲ್ಲರಿಗೂ ಕಲ್ಪಿಸುವ ನಿರ್ಧಾರವನ್ನು ಆಡಳಿತ ಮಂಡಳಿ ಕೈಗೊಂಡಿದೆ. ಸಮಾಜದ ಸದಸ್ಯರು ಹಾಗೂ ಜನಾಂಗದವರಿಗೆ ಪ್ರಥಮ ಪ್ರಾಶಸ್ತ್ಯವಿದ್ದು ಉಳಿದಂತೆ ಇತರರಿಗೂ ಅವಕಾಶ ನೀಡಲಾಗು ವದು ಎಂದರು. ಅಂತರ ಗ್ರಾಮ ಸಾಂಸ್ಕøತಿಕ ಪೈಪೋಟಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಕಾರ್ಯದರ್ಶಿ ಕುಲ್ಲೇಟಿರ ಅಜೀತ್ ನಾಣಯ್ಯ, ಜಂಟಿ ಕಾರ್ಯದರ್ಶಿ ಮಾಚೇಟಿರ ಕುಶಾಲಪ್ಪ, ನಿರ್ಧೇಶಕ ಕಾಟುಮಣಿಯಂಡ ಉಮೇಶ್, ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ಇದ್ದರು.