ಮಡಿಕೇರಿ, ಮೇ 21: ತಲಕಾವೇರಿ ಕುಂಡಿಕೆ ಬಳಿ ಕಣ್ಣಾನೂರಿನ ಅಗಸ್ತ್ಯೇಶ್ವರ ಮಠದ ಸ್ವಾಮೀಜಿ ಎನಿಸಿಕೊಂಡ ವ್ಯಕ್ತಿಯೋರ್ವರಿಂದ ಜಲ ಸಂಚಾರಕ್ಕೆ ತಡೆಯಾಗಿರುವದನ್ನು ಯಾಂತ್ರಿಕವಾಗಿ ಸರಿಪಡಿಸುವದಾಗಿ ಸಮಿತಿಯ ಅಧ್ಯಕ್ಷರು ಏಕಪಕ್ಷೀಯವಾಗಿ ಅನುಮತಿ ನೀಡಿರುವದು ‘ಶಕ್ತಿ’ಯ ಗಮನಕ್ಕೆ ಬಂದಿದೆ.
ಶುಕ್ರವಾರ ಮತ್ತು ಶನಿವಾರದಂದು ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಿ ಈ ಕಾರ್ಯ ನಡೆಸಲು ಅಧ್ಯಕ್ಷರು ಮುಂದಾಗಿರುವದಕ್ಕೆ ಸಮಿತಿಯ ಕೆಲವು ಸದಸ್ಯರು ಮತ್ತು ಕೆಲವು ಭಕ್ತಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ‘ಶಕ್ತಿ’ಯ ಗಮನಕ್ಕೆ ತಂದಿದ್ದಾರೆ.ಪವಿತ್ರ ಕ್ಷೇತ್ರದಲ್ಲಿ ಮುಜರಾಯಿ ಸಮಿತಿಯ ಸಮ್ಮತಿಯೂ ಇಲ್ಲದೆ ಇಂತಹ ರಹಸ್ಯ ಕಾರ್ಯಾಚರಣೆ ಮಾಡುತ್ತಿರುವದು ಕ್ಷೇತ್ರದ ಸಂಪ್ರದಾಯಕ್ಕೆ ಭಂಗ ಉಂಟು ಮಾಡಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.