ಮಡಿಕೇರಿ, ಮೇ 22: ಶ್ರೀ ವಿಕಾರಿ ನಾಮ ಸಂವತ್ಸರದ ವೈಶಾಖ ಕೃಷ್ಣ ಪಂಚಮಿ ತಾ. 24ರಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ನಾಗದೇವರ ಪ್ರತಿಷ್ಠಾ 15ನೇ ವಾರ್ಷಿಕೋತ್ಸವ ಮತ್ತು ಅಶ್ಲೇಷ ಬಲಿ ಕಾರ್ಯಕ್ರಮ ಜರುಗಲಿದೆ. ಈ ಪ್ರಯುಕ್ತ ತಾ. 23ರಂದು (ಇಂದು) ಸಂಜೆ 6.30 ರಿಂದ ಗುರುಗಣಪತಿ ಪೂಜೆ, ಪುಣ್ಯಾಹಃ, ಸಂಕಲ್ಪ ಅಶ್ಲೇಷಾಬಲಿ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.

ತಾ. 24ರಂದು ಬೆಳಿಗ್ಗೆ 8.30 ರಿಂದ ಗುರುಗಣಪತಿ ಪೂಜೆ, ಪುಣ್ಯಾಹ, ನವಕಪ್ರಧಾನ ಕಲಶ ಸ್ಥಾಪನೆ, ನವಕ ಪ್ರಧಾನ ಹೋಮ, ಪೂರ್ಣಾಹುತಿ, ಸ್ವಾಮಿಯ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಪವಮಾನ, ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.