ಮೈಸೂರು, ಮೇ 21: ಲೋಕಸಭಾ ಚುನಾವಣೆಯ ಫಲಿತಾಂಶ ತಾ. 23 ರಂದು ಹೊರಬರಲಿದ್ದು, ಈ ಸಂಬಂಧ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಬೇಕಾಗುವ ಸರ್ವ ಸಿದ್ಧತೆಯನ್ನು ಮೈಸೂರಿನಲ್ಲಿ ಮಾಡಿಕೊಳ್ಳಲಾಗಿದೆ.ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ್ದಾರೆ.ಮತ ಎಣಿಕೆ ಮೈಸೂರಿನ ಪಡುವಾರಹಳ್ಳಿಯಲ್ಲಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಸಲಾಗುತ್ತಿದ್ದು, ತಾ. 23 ರಂದು ಬೆಳಿಗ್ಗೆ 8 ರಿಂದ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನ 2ರಿಂದ 3ಗಂಟೆಯೊಳಗೆ ಇವಿಎಂ ಮತಯಂತ್ರ ಎಣಿಕೆ ಮುಗಿಸಲು ಸಕಲ ವ್ಯವಸ್ಥೆ ಮಾಡಲಾಗಿದ್ದು, ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಕ್ಷೇತ್ರಗಳ ಪೈಕಿ ಮಡಿಕೇರಿ-18, ವೀರಾಜಪೇಟೆ-19, ಪಿರಿಯಾಪಟ್ಟಣ-16, ಹುಣಸೂರು, ಚಾಮುಂಡೇಶ್ವರಿ- ತಲಾ 19, ಕೃಷ್ಣರಾಜ-18, ಚಾಮರಾಜ-17, ನರಸಿಂಹರಾಜ-19 ಸುತ್ತುಗಳಲ್ಲಿ ಎಣಿಕೆ ನಡೆಯಲಿದ್ದು, ಅಂಚೆ ಮತಪತ್ರವನ್ನು ಕೊಠಡಿಯಲ್ಲಿ ಎಣಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಒಂದು ಮತ ಎಣಿಕೆ ಟೇಬಲ್‍ನಲ್ಲಿ ಒಬ್ಬ ಮತ ಎಣಿಕೆ ಮೇಲ್ವಿಚಾರಕ, ಒಬ್ಬ ಮತ ಎಣಿಕೆ ಸಹಾಯಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ಕಾರ್ಯ ನಿರ್ವಹಿಸಲಿದ್ದು, 131 ಪತ್ರಾಂಕಿತ (ಮೊದಲ ಪುಟದಿಂದ)ಅಧಿಕಾರಿಗಳನ್ನು ಎಣಿಕಾ ಮೇಲ್ವಿಚಾರಕರನ್ನಾಗಿ, 131 ಸಿ ವೃಂದದ ನೌಕರರನ್ನು ಎಣಿಕೆ ಸಹಾಯಕರುಗಳಾಗಿ ಮತ್ತು ಕೇಂದ್ರ ಸರಕಾರದ 141 ಅಧಿಕಾರಿಗಳನ್ನು ಮೈಕ್ರೋ ಅಬ್ಸರ್ವರ್‍ಗಳನ್ನಾಗಿ ನಿಯೋಜಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆಗಾಗಿ 8 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ 24 ಪತ್ರಾಂಕಿತ ಅಧಿಕಾರಿಗಳನ್ನು ಎಣಿಕೆ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಒಟ್ಟಾರೆ ಎಣಿಕಾ ಕಾರ್ಯ ಸುಗಮವಾಗಿ ನಡೆಯಲು 427 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ಸಿಬ್ಬಂದಿಗಳನ್ನು ರ್ಯಾಂಡಮೈಸೇಷನ್ ವಿಧಾನದ ನಂತರ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಎಣಿಕೆ ಟೇಬಲ್‍ನಲ್ಲಿ ಕಾರ್ಯ ನಿರ್ವಹಿಸುವರು. ಟ್ಯಾಬುಲೇಷನ್ ಕಾರ್ಯ, ಸೀಲಿಂಗ್ ಕಾರ್ಯ, ಇತರೆ ಕಾರ್ಯಗಳಿಗೆ 800 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಮತ ಎಣಿಕೆ ಕೇಂದ್ರಕ್ಕೆ ಗುರುತಿನ ಚೀಟಿ ಇದ್ದವರಿಗೆ ಪ್ರವೇಶ ಇದ್ದರೆ, ಮಾಧ್ಯಮದವರ ಕೊಠಡಿಯಲ್ಲಿ ಮೊಬೈಲ್ ಬಳಕೆ ಹೊರತುಪಡಿಸಿ ಇಡೀ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧ ಇರುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉz್ದÉೀಶದಿಂದ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಮಧ್ಯರಾತ್ರಿ ತನಕ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಜತೆಗೆ ಯಾವದೇ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಗುರುತಿನಚೀಟಿ ಹೊಂದಿದ್ದು, ಎಣಿಕೆ ಕೇಂದ್ರದೊಳಗೆ ಪ್ರವೇಶಿಸುವಾಗ ಮೂರು ಹಂತದ ತಪಾಸಣೆಗೆ ಒಳಪಡಿಸುವ ಜತೆಗೆ ಎಣಿಕಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮತ ಎಣಿಕೆಯ ಎಲ್ಲಾ ಹಂತಗಳನ್ನು ಚಿತ್ರೀಕರಿಸಲು 18 ವಿಡಿಯೋ ಕ್ಯಾಮರಾ ಬಳಸಲಾಗುತ್ತಿದ್ದು, ತುರ್ತು ಪರಿಸ್ಥಿತಿ ಎದುರಿಸಲು ಅಗ್ನಿಶಾಮಕ ದಳ ನಿಯೋಜಿಸಲಾಗಿದೆ. ಎಣಿಕಾ ಕೇಂದ್ರಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ, ಪೆÇಲೀಸ್ ಸಿಬ್ಬಂದಿಗಳಿಗೆ ಬೆಳಗ್ಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಅಂಚೆ ಮತಗಳ ಎಣಿಕಾ ಕಾರ್ಯ ಮೊದಲು ಆರಂಭಿಸಲಾಗುವದು. ಇವಿಎಂಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ಕಾರ್ಯ ಜರುಗಿಸಿ, ರೌಂಡ್ ವೈಸ್ ರಿಸಲ್ಟ್‍ಗಳನ್ನು ಘೋಷಿಸಲಾಗುವದು. ಎಲ್ಲಾ ಸುತ್ತುಗಳು ಮುಗಿದ ನಂತರ ಚುನಾವಣಾ ವೀಕ್ಷಕರ ಅನುಮತಿ ಪಡೆದು ಚುನಾವಣಾ ಫಲಿತಾಂಶ ಘೋಷಿಸಲಾಗುವದು. ಎಣಿಕೆಯಾದ ಬಳಿಕ ಯಾವದೇ ಮೆರವಣಿಗೆ, ಸಭೆ, ಸಮಾರಂಭಗಳ ಆಚರಣೆ ಇರುವದಿಲ್ಲ. ಪಟಾಕಿಗಳನ್ನು ಸಾರ್ವಜನಿಕ ಸ್ಥಳ ಹಾಗೂ ವಾಸದ ಮನೆಗಳ ಮುಂದೆ ಸಿಡಿಸುವದು, ಯಾವದೇ ವ್ಯಕ್ತಿ ಸ್ಫೋಟಕ ವಸ್ತು, ಮಾರಕಾಸ್ತ್ರ ಒಯ್ಯುವದನ್ನು ನಿಷೇಧಿಸಲಾಗಿದೆ ಎಂದರು.
ಪೆÇಲೀಸ್ ಬಂದೋಬಸ್ತ್: ಲೋಕಸಭಾ ಚುನಾವಣಾ ಎಣಿಕೆ ಕಾರ್ಯ ಗುರುವಾರ ನಡೆಯಲಿರುವ ಕಾರಣ ಎಣಿಕಾ ಕೇಂದ್ರ ಸೇರಿ ಮೈಸೂರು ನಗರದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಿದ್ದು, ಎಲ್ಲೆಡೆ ನಿಗಾ ಇಡಲು 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಎಣಿಕಾ ಕೇಂದ್ರ ಸೇರಿ ಸುತ್ತಮುತ್ತಲು ನಾಲ್ಕು ಡಿಸಿಪಿ, ಆರು ಎಸಿಪಿ, 22 ಇನ್ಸ್‍ಪೆಕ್ಟರ್, 23 ಸಬ್ ಇನ್ಸ್‍ಪೆಕ್ಟರ್, 103 ಎಎಸ್‍ಐ, 582 ಮುಖ್ಯಪೇದೆ, ಪೇದೆ, ಆರು ಸಿಎಆರ್‍ತುಕಡಿ, ಮೂರು ಕೆಎಸ್‍ಆರ್‍ಪಿ ತುಕಡಿ, 30 ಕಮಾಂಡೋ ಪಡೆ, 10 ಮೌಂಟೆಂಡ್ ಪೆÇಲೀಸ್, ಶ್ವಾನದಳ, ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ತಿಳಿಸಿದರು.
ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮೂರು ಎಸಿಪಿ, ಆರು ಇನ್ಸ್‍ಪೆಕ್ಟರ್, 56 ಎಎಸ್‍ಐ, 662 ಮುಖ್ಯಪೇದೆ, ಸಿಬ್ಬಂದಿ, 1 ಕೆಎಸ್‍ಆರ್‍ಪಿ ತುಕಡಿ, 8 ಸಿಎಆರ್ ತುಕಡಿ, 30 ಕಮಾಂಡೋಪಡೆ, 20 ಮೌಂಟೆಂಡ್ ಪೆÇಲೀಸ್ ನಿಯೋಜಿಸಲಾಗಿದೆ. ಎಂಟು ಕಡೆಗಳಲ್ಲಿ ಚೆಕ್‍ಪೆÇೀಸ್ಟ್ ತೆರೆದಿದ್ದು, 286 ಸ್ಟಾಟಿಂಗ್ ಪಿಕೆಟಿಂಗ್‍ನಲ್ಲಿ ಮೆನ್ ಹಾಕಲಾಗಿದೆ. ಇದಲ್ಲದೆ 82 ಚೀತಾ ವಾಹನ, ಗರುಡ, ಇಂಟರ್‍ಸೆಪ್ಟರ್ ವಾಹನ ಬಳಸಿಕೊಳ್ಳಲಾಗುವದು ಎಂದರು.
ನಿಷೇಧಾಜ್ಞೆ: ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ 23ರಂದು ನಡೆಯಲಿದ್ದು, ಫಲಿತಾಂಶ ಪ್ರಕಟಗೊಂಡ ನಂತರ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಲಿದ್ದು, ಈ ವೇಳೆಯಲ್ಲಿ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರ ನಡುವೆ ಪರಸ್ಪರ ಘರ್ಷಣೆಗಳು ಉಂಟಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೈಸೂರು ಜಿಲ್ಲಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಾದ 210-ಪಿರಿಯಾಪಟ್ಟಣ, 211-ಕೆ.ಆರ್.ನಗರ, 212-ಹುಣಸೂರು, 213-ಹೆಚ್.ಡಿ.ಕೋಟೆ, 214-ನಂಜನಗೂಡು, 215-ಚಾಮುಂಡೇಶ್ವರಿ, 219-ವರುಣಾ ಹಾಗೂ 220-ಟಿ.ನರಸೀಪುರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 23 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆದೇಶ ಹೊರಡಿಸಿದ್ದಾರೆ.