ಶನಿವಾರಸಂತೆ, ಮೇ 21: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ದೇವಾಲಯದ ವಾರ್ಷಿಕ ಹಬ್ಬದ ಕಾರ್ಯಕ್ರಮಗಳು ತಾ. 22ರಿಂದ (ಇಂದಿನಿಂದ) 27ರವರೆಗೆ ನಡೆಯಲಿದೆ.

ಸಂಜೆ 5.30ಕ್ಕೆ ಹಬ್ಬದ ಧ್ವಜಾರೋಹಣ ನೆರವೇರಲಿದೆ. ನಂತರ ಪ್ರತಿದಿನ ಸಂಜೆ 5.30 ರಿಂದ ತೇರು ಮೆರವಣಿಗೆ, ಬಲಿಪೂಜೆ, ಪ್ರಭೋದನೆ ಮತ್ತು ಪರಮಪ್ರಸಾದ ಆರಾಧನೆ, ಹಬ್ಬದ ಗಾಯನ ಬಲಿಪೂಜೆ ನಡೆಯಲಿದೆ.

ತಾ. 28ರಂದು ಸಂಜೆ 5 ಗಂಟೆಗೆ ಹಬ್ಬದ ಗಾಯನ ಬಲಿಪೂಜೆ ಹಾಗೂ 7 ಗಂಟೆಗೆ ಶೃಂಗಾರ ತೇರು ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.