ನಾಪೋಕ್ಲು, ಮೇ 21: ಸಮೀಪದ ಪಾಲೂರು ಗ್ರಾಮದ ಶ್ರೀಕಾಳಿಕಾಂಬ (ಅಮ್ಮನೋರು) ದೇವಿಯ ವಾರ್ಷಿಕ ಉತ್ಸವ ತಾ. 24 ರಂದು ಬೆಳಿಗ್ಗೆ 9.30 ರಿಂದ ಅಪರಾಹ್ನ 3ಗಂಟೆಯವರೆಗೆ ನಡೆಯಲಿದೆ. ಈ ಸಂದರ್ಭ ವಿಶೇಷ ಪೂಜೆ, ಮಹಾಪೂಜೆ ಹಾಗೂ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.