ನವದೆಹಲಿ, ಮೇ 21: ಲೋಕಸಭೆ ಚುನಾವಣೆಗೆ ಮತದಾನ ಮುಗಿದಿದ್ದು ಫಲಿತಾಂಶಕ್ಕೆ ಇನ್ನು ಒಂದು ದಿನ ಬಾಕಿ ಇರುವಂತೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ ಗೆ 72.19 ಡಾಲರ್ ಇದ್ದು ಶೇ. 0.22ರಷ್ಟು ಬೆಲೆ ಏರಿಕೆ ದಾಖಲಿಸಿದೆ. ಈ ಹಿನ್ನೆಲೆ ದೇಶದಲ್ಲಿ ಪೆಟ್ರೋಲ್ ಬೆಲೆಯಲ್ಲಿ 5 ಪೈಸೆ ಏರಿಕೆ ಕಂಡಿದ್ದು ಡೀಸೆಲ್‍ನಲ್ಲಿ 9 ಪೈಸೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 71.17 ರೂ. ಕೋಲ್ಕತ್ತಾದಲ್ಲಿ 69.36 ರೂ. ಮುಂಬೈನಲ್ಲಿ 76.78 ರೂ. ಚೆನ್ನೈನಲ್ಲಿ 73.24 ರೂ. ಇದೆ. ಡಿಸೇಲ್ ಬೆಲೆ ಮುಂಬೈನಲ್ಲಿ 67.96 ರೂ. ಕೋಲ್ಕತ್ತಾದಲ್ಲಿ 73.87 ಹಾಗೂ ಚೆನ್ನೈನಲ್ಲಿ 69.97 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 5 ಪೈಸೆ ಏರಿಕೆಯಾಗಿದ್ದು 73.49 ರೂಪಾಯಿ ಆಗಿದೆ.
ಇನ್ನು ಡೀಸೆಲ್ 68.35 ರೂ. ಆಗಿದೆ.