ಮಡಿಕೇರಿ, ಮೇ 19: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಕಾರದೊಂದಿಗೆ ತಲಾ 20 ಸಾವಿರ ರೂ.ಗಳಂತೆ ಒಟ್ಟು 10 ಲಕ್ಷ ರೂ. ಆರ್ಥಿಕ ನೆರವನ್ನು ಕೊಡಗು ಜಲಪ್ರಳಯದಲ್ಲಿನ 50 ಮಂದಿ ಸಂತ್ರಸ್ತರಿಗೆ ನೀಡಲಾಯಿತು. ನಗರದ ಕೂರ್ಗ್ ಇಂಟರ್ ನ್ಯಾಷನಲ್ ಹೊಟೇಲ್ ಸಭಾಂಗಣ ದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ, ಕೊಡಗಿನವ ರೆಂದೂ ಏನನ್ನೂ ಕೇಳಿದವರಲ್ಲ. ಆದರೆ ಮಹಾ ಮಳೆಯಿಂದಾಗಿ ಕೊಡಗಿನವರೂ ಸಂಕಷ್ಟಕ್ಕೆ ಸಿಲುಕಿ ನೆರವು ಕೇಳುವ ಸ್ಥಿತಿ ತಲಪಿದ್ದಾರೆ. ಸಂತ್ರಸ್ತರಾದವರು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳ ಬೇಕಾಗಿದೆ. ನಕಾರಾತ್ಮಕ ಚಿಂತನೆಯನ್ನು ಬದಿಗಿಟ್ಟು ಹೊಸ ಜೀವನದ ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕೊಡಗಿನಲ್ಲಿ ಪ್ರಕೃತಿ ವಿಕೋಪ ದಿಂದ ಸಂಕಷ್ಟಕ್ಕೊಳ ಗಾದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಅಗತ್ಯ ಯೋಜನೆಯ ನೆರವನ್ನು ಪಕ್ಷಾತೀತವಾಗಿ ನೀಡುವಲ್ಲಿ ಸಂಸ್ಥೆ ಮುಂದಾಗಲಿದೆ ಎಂದು ಪ್ರಕಟಿಸಿದ ಸುಧಾಕರ ಶೆಟ್ಟಿ, ಸಂತ್ರಸ್ತರ ಮಕ್ಕಳಿಗೆ ಸೂಕ್ತ ಶಿಕ್ಷಣಕ್ಕೂ ರಾಜ್ಯ ಚೇಂಬರ್ ಅಗತ್ಯ ನೆರವನ್ನು ಜಿಲ್ಲಾ ಚೇಂಬರ್ ಸಹಕಾರದೊಂದಿಗೆ ನೀಡಲಿದೆ ಎಂದು ಭರವಸೆ ನೀಡಿದರು. ರಾಜ್ಯ ಚೇಂಬರ್‍ನಿಂದ ಪ್ರಕಟಿಸಲಾಗುವ ಮಾಸಿಕ ಪತ್ರಿಕೆಯಲ್ಲಿ ಕೊಡಗಿನ ಸಂತ್ರಸ್ತರ ಸ್ಥಿತಿ ಬಗ್ಗೆ ಲೇಖನ ಪ್ರಕಟಸಿ, ರಾಜ್ಯ ವ್ಯಾಪಿಯಿರುವ 20 ಲಕ್ಷ ಸದಸ್ಯರಿಂದ ಅಗತ್ಯ ನೆರವನ್ನೂ ಪಡೆಯಲಾಗುತ್ತದೆ ಎಂದೂ ಘೋಷಿಸಿದರು.
ಕೊಡಗಿನಲ್ಲಿ ಕುಸಿತಗೊಂಡಿರುವ ಪ್ರವಾಸೋದ್ಯಮ ಕ್ಷೇತ್ರದ ಚೇತರಿಕೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ರಾಜ್ಯಾಧ್ಯಕ್ಷರು, ವಾಣಿಜ್ಯೋದ್ಯಮಿಗಳು ಹಾಗೂ ಸರ್ಕಾರದ ಮಧ್ಯೆ ಎಫ್.ಕೆ.ಸಿ.ಸಿ.ಐ. ಸೌಹಾರ್ದ ಸೇತುವಂತೆ ಕಾರ್ಯ ನಿರ್ವಹಿಸಲಿದೆ. ಕರ್ನಾಟಕದಲ್ಲಿನ ವ್ಯಾಪಾರಿ
(ಮೊದಲ ಪುಟದಿಂದ) ಸಮುದಾಯ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಸನ್ಯಾಸಿ, ರಾಜಕಾರಣಿ ಸೇರಿದಂತೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವ್ಯಾಪಾರ ಮಾಡುವವರೇ ಆಗಿದ್ದು ಸರ್ಕಾರಕ್ಕೆ ಸಮರ್ಪಕ ರೀತಿಯಲ್ಲಿ ತೆರಿಗೆ ಪಾವತಿಸಿ ಯೋಗ್ಯ ರೀತಿಯಲ್ಲಿ ವ್ಯಾಪಾರ ಮಾಡುವವನೇ ನಿಜವಾದ ವ್ಯಾಪಾರಿಯಾಗಿದ್ದಾನೆ ಎಂದು ಶೆಟ್ಟಿ ವಿಶ್ಲೇಷಿಸಿದರು. 103 ವರ್ಷಗಳಿಂದ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಕರ್ನಾಟಕದ ವರ್ತಕರ ಹಿತ ಕಾಯುವಲ್ಲಿ ಶ್ರಮಿಸುತ್ತಿದೆ ಎಂದು ಅವರು ಸ್ಮರಿಸಿಕೊಂಡರು.
ರಾಜ್ಯ ಎಫ್.ಕೆ.ಸಿ.ಸಿ.ಐ. ಸದಸ್ಯ ಕೆ.ಬಿ. ಗಿರೀಶ್‍ಗಣಪತಿ ಮಾತನಾಡಿ, ರಾಜ್ಯ ಸಂಘದಿಂದ ನೀಡಲಾಗುತ್ತಿರುವ ಈ ಪರಿಹಾರ ಪ್ರಾರಂಭಿಕ ಹಂತದ್ದಾಗಿದ್ದು; ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವರ್ತಕರ ನೆರವಿನಿಂದ ಮತ್ತಷ್ಟು ಆರ್ಥಿಕ ನೆರವನ್ನು ಕೊಡಗಿನ ಸಂತ್ರಸ್ತರಿಗೆ ಕಲ್ಪಿಸಲು ಬದ್ದ ಎಂದು ಹೇಳಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಕೊಡಗಿನ ಸಂತ್ರಸ್ತರ ನೆರವಿಗೆ ಬಂದ ರಾಜ್ಯ ಚೇಂಬರ್ ಪ್ರಮುಖರ ನೆರವಿಗೆ ಧನ್ಯವಾದ ಸಲ್ಲಿಸಿದರಲ್ಲದೆ, ಜಿಲ್ಲೆಯ ಜನತೆಯ ಪರ ರಾಜ್ಯ ಚೇಂಬರ್ ಸದಾ ನೆರವಿನ ಸೇತುವಾಗಿ ನಿಲ್ಲುತ್ತಿರುವದು ಗಮನಾರ್ಹ ಎಂದು ಶ್ಲಾಘಿಸಿದರು.
ಜಿಲ್ಲಾ ಚೇಂಬರ್‍ನ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮ ನಿರೂಪಿಸಿ ಮಾತನಾಡಿ, ಕೊಡಗಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ಅಪಪ್ರಚಾg Àದಿಂದಾಗಿ ಪ್ರವಾಸೋದ್ಯಮ ಮತ್ತೆ ಕುಸಿತಗೊಂಡಿದ್ದು; ಪ್ರವಾಸೋದ್ಯಮದ ಚೇತರಿಕೆ ನಿಟ್ಟಿನಲ್ಲಿ ಸರ್ಕಾರದ ಪ್ರಮುಖರೊಂದಿಗೆ ಚೇಂಬರ್ ನಿಯೋಗ ತೆರಳಿ ಸೂಕ್ತ ಕ್ರವ ುಕೈಗೊಳ್ಳುವ ಅಗತ್ಯವಿದೆ ಎಂದು ಗಮನ ಸೆಳೆದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಾಜಿ ಅಧ್ಯಕ್ಷ ಆರ್. ಶಿವಕುಮಾರ್, ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಮೋಂತಿಗಣೇಶ್, ರಾಜ್ಯ ಚೇಂಬರ್ ಪ್ರಮುಖರಾದ ಪಿ.ಸಿ. ರಾವ್, ಸಂಕಪ್ಪ, ಜಿಲ್ಲಾ ಚೇಂಬರ್ ಪ್ರಮುಖರಾದ ಶ್ಯಾಮ್ ಪ್ರಸಾದ್, ಬಿ.ಆರ್. ನಾಗೇಂದ್ರ ಪ್ರಸಾದ್, ರವಿ, ಬಾಬುಚಂದ್ರ ಉಳ್ಳಾಗಡ್ಡಿ, ಬಿ.ಕೆ. ಅರುಣ್‍ಕುಮಾರ್, ಅರುಣ್ ಅಪ್ಪಚ್ಚು, ಕೆ. ಸುರೇಶ್, ಸೇರಿದಂತೆ ಪ್ರಮುಖರು ಹಾಜರಿದ್ದರು.
ಕೊಡಗಿನ ಸಂತ್ರಸ್ತರಿಗೆ 10 ಲಕ್ಷ ರೂ. ಆರ್ಥಿಕ ನೆರವು ನೀಡಿದ ರಾಜ್ಯ ಅಧ್ಯಕ್ಷರನ್ನು ಈ ಸಂದರ್ಭ ಜಿಲ್ಲಾ ಚೇಂಬರ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.