ಸೋಮವಾರಪೇಟೆ, ಮೇ 19: ಕಳೆದ ಅನೇಕ ದಶಕಗಳಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಸೋಮವಾರಪೇಟೆ ಸೆಸ್ಕ್ ಇದೀಗ ಮೇಲ್ದರ್ಜೆಗೇರುತ್ತಿದ್ದು, ಕೇಂದ್ರ ಸರ್ಕಾರದ ರೂ. 5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ.ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆಯಡಿ ಸಂಸದ ಪ್ರತಾಪ್ ಸಿಂಹ ಅವರ ಪರಿಶ್ರಮದಿಂದ 5 ಕೋಟಿ ಅನುದಾನ ಮಂಜೂರಾಗಿದ್ದು, ಇದೀಗ ಕಾಮಗಾರಿ ಭರದಿಂದ ಸಾಗುತ್ತಿದೆ. ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿ, ಓಬೀರಾಯನ ಕಾಲದ ಟ್ರಾನ್ಸ್‍ಫಾರ್ಮರ್, ಸೋಮವಾರಪೇಟೆ, ಮೇ 19: ಕಳೆದ ಅನೇಕ ದಶಕಗಳಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಸೋಮವಾರಪೇಟೆ ಸೆಸ್ಕ್ ಇದೀಗ ಮೇಲ್ದರ್ಜೆಗೇರುತ್ತಿದ್ದು, ಕೇಂದ್ರ ಸರ್ಕಾರದ ರೂ. 5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ.

ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆಯಡಿ ಸಂಸದ ಪ್ರತಾಪ್ ಸಿಂಹ ಅವರ ಪರಿಶ್ರಮದಿಂದ 5 ಕೋಟಿ ಅನುದಾನ ಮಂಜೂರಾಗಿದ್ದು, ಇದೀಗ ಕಾಮಗಾರಿ ಭರದಿಂದ ಸಾಗುತ್ತಿದೆ. ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿ, ಓಬೀರಾಯನ ಕಾಲದ ಟ್ರಾನ್ಸ್‍ಫಾರ್ಮರ್, (ಮೊದಲ ಪುಟದಿಂದ) ಇದರೊಂದಿಗೆ ವಿದ್ಯುತ್ ತಂತಿ, ಟ್ರಾನ್ಸ್‍ಫಾರ್ಮರ್‍ಗಳನ್ನು ಅಳವಡಿಸಲಾಗುತ್ತಿದ್ದು, ಮುಂದಿನ ಒಂದು ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಯನ್ನು ಅಭಿಯಂತರರು ವ್ಯಕ್ತಪಡಿಸಿದ್ದಾರೆ.

ತೀರಾ ಹಳೆಯ ಅಪಾಯದ ಅಂಚಿನಲ್ಲಿರುವ ಕಂಬಗಳನ್ನು ಬದಲಾಯಿಸುವ ಕಾರ್ಯ ನಡೆಯುತ್ತಿದ್ದು, ಗಟ್ಟಿಮುಟ್ಟಾಗಿರುವ ವಿದ್ಯುತ್ ಕಂಬಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತಿದೆ ಎಂದು ಸೆಸ್ಕ್‍ನ ಅಭಿಯಂತರ ಸಂತೋಷ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಇದರೊಂದಿಗೆ ನೂತನವಾಗಿ 50 ಟ್ರಾನ್ಸ್‍ಫಾರ್ಮರ್‍ಗಳ ಪೈಕಿ ಈಗಾಗಲೇ 30 ಟ್ರಾನ್ಸ್‍ಫಾರ್ಮರ್‍ಗಳನ್ನು ಅಳವಡಿಸಲಾಗಿದೆ. 11 ಕಿ.ಮೀ. ಹೈಟೆನ್ಷನ್ ವಿದ್ಯುತ್ ತಂತಿ ಮತ್ತು 10 ಕಿ.ಮೀ. ಲೋ ಟೆನ್ಷನ್ ವಿದ್ಯುತ್ ತಂತಿಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇದೇ ಯೋಜನೆಯಡಿ ಸೋಮವಾರಪೇಟೆಯಲ್ಲಿ 33 ಕೆ.ವಿ. ವಿದ್ಯುತ್ ಘಟಕ ಸ್ಥಾಪನೆಯೂ ಸೇರಿದೆ. ಇಲಾಖೆಯಿಂದ ಸೋಮವಾರಪೇಟೆಗೆ 66 ಕೆ.ವಿ. ವಿದ್ಯುತ್ ಸ್ಥಾವರ ಸ್ಥಾಪಿಸಲು ಅನುಮೋದನೆಯೂ ದೊರಕಿರುವದರಿಂದ 33 ಕೆ.ವಿ. ಘಟಕ ಸ್ಥಾಪನೆಯ ಯೋಜನೆಯನ್ನು ಕೈಬಿಡಲಾಗಿದೆ. ಒಮ್ಮೆಲೆ 66 ಕೆ.ವಿ. ಘಟಕ ಸ್ಥಾಪಿಸಿದರೆ ಈ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬದು ಸೆಸ್ಕ್‍ನ ಲೆಕ್ಕಾಚಾರವಾಗಿದೆ.

66 ಕೆ.ವಿ. ವಿದ್ಯುತ್ ಘಟಕವನ್ನು ಈಗಾಗಲೇ ಹಾನಗಲ್ಲು ಬಾಣೆಯಲ್ಲಿ ಗುರುತಿಸಲಾಗಿರುವ ಸ್ಥಳದಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. ಸುಂಟಿಕೊಪ್ಪ ಮಾರ್ಗವಾಗಿ ಮಾದಾಪುರ-ಸೋಮವಾರಪೇಟೆಗೆ 66 ಕೆ.ವಿ. ಲೈನ್ ಹಾದು ಬರಲಿದೆ. ಈ ಮಾರ್ಗದಲ್ಲಿ ಟವರ್ ನಿರ್ಮಿಸಿ ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನವನ್ನು ಸೆಸ್ಕ್ ಇಲಾಖೆ ಮಾಡುತ್ತಿದೆ.

ಇದೀಗ ಕೇಂದ್ರ ಸರ್ಕಾರದ 5 ಕೋಟಿ ಅನುದಾನದಲ್ಲಿ ಐಪಿಡಿಎಸ್ ಯೋಜನೆಯ ಮೂಲಕ ವಿದ್ಯುತ್ ಸಂಬಂಧಿತ ಸಮಸ್ಯೆಗಳು ದೂರವಾಗಲಿವೆ ಎಂಬ ಆಶಾಭಾವನೆ ಸಾರ್ವಜನಿಕ ವಲಯದಲ್ಲಿದೆ. ಮಳೆಗಾಲಕ್ಕೂ ಮುನ್ನವೇ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸೆಸ್ಕ್ ಕಾರ್ಯೋನ್ಮುಖವಾಗಿದೆ. - ವಿಜಯ್ ಹಾನಗಲ್