ಶನಿವಾರಸಂತೆ, ಮೇ 19: ಜಾತಿ ಮತ ಧರ್ಮ ಎಂದು ಯಾರು ಬೇಧ ಬಾವ ಮಾಡಬಾರದು ಮನುಷ್ಯ ಜನ್ಮ ಎಲ್ಲವು ಒಂದೆ ಎಂದು ಸೋಮವಾರಪೇಟೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಹಾಲಪ್ಪ ಹೇಳಿದರು. ಶನಿವಾರಸಂತೆಯ ಜಾಮಿಯ ಮಸೀದಿಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡಿ ಮಸೀದಿಯ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಸರ್ದಾರ್ ಅಹಮ್ಮದ್ ಮಾತನಾಡಿ ಶನಿವಾರಸಂತೆ ಸೇರಿದಂತೆ ಎಲ್ಲಾ ಭಾಗದಲ್ಲೂ ಸಹ ಹಿಂದು ಮುಸ್ಲಿಂ ಬಾಂಧವರು ಸಹೋದರತ್ವದಿಂದ ಜೀವನ ನಡೆಸುತ್ತಿದ್ದಾರೆ ಎಂದರು.

ಜಾಮೀಯ ಮಸೀದಿ ಹಾಗೂ ಈದ್ಗಾ ಮಸೀದಿಯ ಧರ್ಮಗುರುಗಳು ಹಾಗೂ ಅಧ್ಯಕ್ಷರುಗಳು ಹಾಗೂ ಶನಿವಾರಸಂತೆ ವ್ಯಾಪ್ತಿಯ ಮುಸ್ಲಿಂ ಸಮುದಾಯದ ಸರ್ವ ಸದಸ್ಯರುಗಳು ಹಾಜರಿದ್ದರು.