ಮಡಿಕೇರಿ, ಮೇ 20: ಇಲ್ಲಿನ ದೇಚೂರು ಶ್ರೀ ರಾಮವಿದ್ಯಾಗಣಪತಿ ದೇವಾಲಯದ 21ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ತಾ. 25 ರಿಂದ ತಾ. 27ರ ತನಕ ನಡೆಯಲಿದೆ. ಮೂರು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿರುವ ದೈವಿಕ ಕೈಂಕರ್ಯ ಗಳನ್ನು ಬಿಳಿಗೇರಿ ಉದಯಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಸಲಾಗುವದು ಎಂದು ಪ್ರಕಟಣೆ ತಿಳಿಸಿದೆ. ತಾ. 27 ರಂದು ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.