ಸಿದ್ದಾಪುರ, ಮೇ 20: ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.
ತಿತಿಮತಿ ಭದ್ರಗೋಳದ ನಿವಾಸಿಯಾಗಿರುವ ಕುಶಾಲಪ್ಪ ಎಂಬವರು ತಲಕಾವೇರಿಗೆ ತೆರಳಿ ಹಿಂತಿರುಗಿ ಸಂಜೆ ಕಾರಿನಲ್ಲಿ (ಕೆ.ಎ 51 ಎಂ.ಜಿ 5573) ಪಾಲಿಬೆಟ್ಟ ಮಾರ್ಗವಾಗಿ ಬರುತ್ತಿದ್ದ ಸಂದರ್ಭ ಚೆನ್ನಯ್ಯನಕೋಟೆಯಿಂದ ಪಾಲಿಬೆಟ್ಟಕ್ಕೆ ಬರುತ್ತಿದ್ದ ರಾಜೇಶ್ ಎಂಬವರ ಕಾರು (ಕೆ.ಎ 02 ಪಿ 5217) ಕೋಟೆಬೆಟ್ಟ ಎಸ್ಟೇಟ್ ಬಳಿ ಕುಶಾಲಪ್ಪ ಅವರ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಕುಶಾಲಪ್ಪ ಹಾಗೂ ಅವರ ಕಾರಿನಲ್ಲಿದ್ದ ಸಂಬಂಧಿಗಳಿಗೆ ಗಾಯವಾಗಿದೆ.
ಮತ್ತೊಂದು ಕಾರಿನಲ್ಲಿದ್ದ ರಾಜೇಶ್ ಕೂಡ ಗಾಯಗೊಂಡಿದ್ದು, ಗಾಯಾಳುಗಳು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.ಸಿದ್ದಾಪುರ ಠಾಣಾಧಿಕಾರಿ ಮಹೇಶ್, ಮುಖ್ಯ ಪೇದೆ ಶ್ರೀನಿವಾಸ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.