ಮಡಿಕೇರಿ, ಮೇ 19: ಹಲ್ಲೆ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 2004ರಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆನೆಕಾಡು ಬಳಿ ಕುಶಾಲನಗರ ನಿವಾಸಿ ಪುಂಡರಿಕಾಕ್ಷ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 1 ಲಕ್ಷದ 35 ಸಾವಿರ ಹಣ ದರೋಡೆ ಮಾಡಿ 2006ರಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ನಂತರ ತಲೆ ಮರೆಸಿಕೊಂಡಿದ್ದ ಗರ್ವಾಲೆ ಗ್ರಾಮದ ದೊಡ್ಡೇರ ವಸಂತ ಎಂಬಾತನನ್ನು 13 ವರ್ಷಗಳ ಬಳಿಕ ಬಂಧಿಸಲಾಗಿದೆ.
ಎಸ್ಪಿ ಡಾ. ಸುಮನ್, ಡಿವೈಎಸ್ಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ದಿನೇಶ್ ಕುಮಾರ್, ಠಾಣಾಧಿಕಾರಿ ನಂದೀಶ್ ಕುಮಾರ್, ಸಿಬ್ಬಂದಿಗಳಾದ ಹೆಚ್.ಎಸ್. ರವಿ, ಎಸ್.ವಿ. ವಿವೇಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.