ಗೋಣಿಕೊಪ್ಪ ವರದಿ, ಮೇ 17: ತೂಚಮಕೇರಿ ವ್ಯಾಪ್ತಿಯಲ್ಲಿ ನೀರಿಲ್ಲದೆ ಬಾವಿಗಳು ಬತ್ತುತ್ತಿರುವದರಿಂದ ಕೊಳವೆ ಬಾವಿ ತೋಡುವ ಕಾರ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಚಾಲನೆ ನೀಡಲಾಯಿತು.
ಅಲ್ಲಿನ ಈಶ್ವರ ಕಾಲೋನಿಯಲ್ಲಿರುವ ಮೂರು ಬಾವಿಗಳು ನೀರಿಲ್ಲದೆ ಬತ್ತಿಹೋಗಿರುವದರಿಂದ ಅದೇ ಬಾವಿಗಳಿಗೆ ರಿಂಗ್ ಹಾಕಲು ಕಲ್ಲು ತೊಡಕ್ಕಾಗಿದೆ. ಇದರಿಂದಾಗಿ ಸ್ಥಳೀಯ ಪಂಚಾಯ್ತಿ ಅನುದಾನದಲ್ಲಿ ಸಮೀಪದಲ್ಲಿಯೇ ಕೊಳವೆ ಬಾವಿ ತೋಡುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀಜಾ ಶಾಜಿ, ಬಲ್ಯಮುಂಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಿಂಡಮಾಡ ಕುಶಿ, ಸದಸ್ಯೆ ಪ್ರೀತ್ ಪೊನ್ನಪ್ಪ, ಸ್ಥಳೀಯರುಗಳಾದ ಗೋಪಾಲ್, ಪೆಮ್ಮಂಡ ಅರುಣ್ ಈ ಸಂದರ್ಭ ಉಪಸ್ಥಿತರಿದ್ದರು.