ವೀರಾಜಪೇಟೆ, ಮೇ 17: ಮೈತಾಡಿ ನಾಂಗಾಲ ಚಾಮುಂಡೇಶ್ವರಿ ದೇವಾಲಯದ ಜೀರ್ಣೋದ್ಧಾರ ಸಮಿತಿ ವತಿಯಿಂದ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯ ತಾ. 13 ರಿಂದ ಪ್ರಾರಂಭ ಗೊಂಡು ತಾ. 16 ರಂದು ಚಾಲಕುನ್ನಿತ್ತಿಲಂ ಗೋಪಾಲಕೃಷ್ಣ ನಂಬೂದರಿಯ ಮೂಲಕ ಲೋಕಾರ್ಪಣೆಗೊಂಡಿತು.
ಪೂರ್ವಾಹ್ನ 7 ಗಂಟೆಯಿಂದ 12 ಗಂಟೆಯವರೆಗೆ ಗೋಪ್ರಜೆ, ಏಕಾಕ್ಷರೀಗಣಯಾಗ, ಜೀರ್ಣೋದ್ಧಾರ, ಅನಿಜ್ಞಾ ಕಲಶ, ಕಲಾಹೋಮ, ಬಿಂಬಶುದ್ದಿ, ಪಂಚದುರ್ಗಾ ಹವನ, ಸರ್ವ ಪ್ರಾಯಶ್ಚಿತಹೋಮ, ಕಲಾಶಾಭಿಷೇಕ, ತತ್ವ ಕಲಾಶಾಭಿಷೇಕ ಮಹಾಪೂಜೆಗಳು ನಡೆದವು. ಪೂಜಾ ವಿದಿವಿಧಾನಗಳ ನಡುವೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಲ್ಲಚಂಡ ಪೂವಯ್ಯ ವಹಿಸಿದ್ದರು.
ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ಮಾತನಾಡಿ ದೇವಾಲಯಕ್ಕೆ 700 ವರ್ಷಗಳ ಅಧಿಕ ಇತಿಹಾಸ ಇದ್ದು ಪರಕೀಯರ ದಾಳಿಗೆ ಸಿಲುಕಿ ಸಂಪೂರ್ಣ ನಾಶವಾಗಿತ್ತು. 1964 ರಲ್ಲಿ ಬಲ್ಲಚಂಡ ಪೂವಯ್ಯ ಅವರು ತೋಟದ ಕೆಲಸ ಮಾಡುತ್ತಿರುವಾಗ ದೇವಾಲಯದ ಅವಶೇಷಗಳು ಪತ್ತೆಯಾದ ನಂತರ ಗ್ರಾಮಸ್ಥರು ಸೇರಿ ಇಲ್ಲಿಯವರೆಗೆ ತಿಂಗಳ ಪೂಜೆ ನೆರವೇರಿಸಲಾಗುತಿತ್ತು ಇದೀಗ ಗ್ರಾಮಸ್ಥರು ಹಾಗೂ ಊರಿನವರು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸಹಕಾರದಿಂದ ದೇವಾಲಯದ ಪುನರ್ ಪ್ರತಿಷ್ಠಾಪನೆ ಸಾಧ್ಯವಾಯಿತು ಎಂದು ಹೇಳಿದರು. ಮೈತಾಡಿ ಮಂದತಮ್ಮೆ ದೇವಾಲಯದ ಅಧ್ಯಕ್ಷ ಕುಂಡಚ್ಚಿರ ಚಿಂಗಪ್ಪ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಪಡಿಞರಂಡ ಅಯ್ಯಪ್ಪ, ಬೇರೆರ ಮಧು ಅಯ್ಯಣ್ಣ, ಬೆಂಗಳೂರು ಎಲ್.ಐ.ಸಿ ಆಡಳಿತಾಧಿಕಾರಿ ಬಲ್ಲಚಂಡ ಕಿಶನ್ ಕುಶಾಲಪ್ಪ, ದಾನಿಗಳಾದ ತಡಿಯಂಗಡ ತಾರಾ ಸದಾನಂದ, ಬೊಳ್ಳಿಬಿಲ್ಲ್ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಮುಂಡಚಾಡಿರ ನಂದ, ಹುಲುಗುಂದ ಭಗವತಿ ದೇವಸ್ಥಾನದ ಅಧ್ಯಕ್ಷ ತೊತ್ತೇರ ಪೊನ್ನಪ್ಪ ಮತ್ತಿತರರು ಉಪಸ್ಥಿತ ರಿದ್ದರು. ಈ ಸಂದರ್ಭ ದಾನಿಗಳೂ ಹಾಗೂ ದೇವಾಲಯದ ಅಭಿವೃದ್ದಿಗೆ ಶ್ರಮಿಸಿದ ತಡಿಯಂಗಡ ತಾರಾ ಸದಾನಂದ, ಬಲ್ಲಚಂಡ ಕಿಶನ್ ಕುಶಾಲಪ್ಪ, ಬೇರೆರ ಮಧು ಅಯ್ಯಣ್ಣ, ಡಾ ಬಲ್ಲಚಂಡ ಸೋಮಯ್ಯ, ಬಲ್ಲಚಂಡ ಸುಬ್ಬಯ್ಯ, ಬಲ್ಲಚಂಡ ಅನಿತಾ ದೇವಯ್ಯ, ಗೋಪಾಲಕೃಷ್ಣ ನಂಬೂದರಿ, ಬಲ್ಲಚಂಡ ಪೂವಯ್ಯ, ಚಪ್ಪಂಡ ಹರೀಶ್ ಉತ್ತಯ್ಯ, ಪಡಿಞರಂಡ ಅಯ್ಯಪ್ಪ, ಮುಂಡಚಾಡಿರ ನಂದ, ತೊತ್ತೇರ ಪೊನ್ನಪ್ಪ, ಬಾಳೆಕುಟ್ಟಿರ ಮಂದಣ್ಣ, ಕುಂಡಚ್ಚೀರ ಚಿಂಗಪ್ಪ, ಗುತ್ತಿಗೆದಾರ ರವಿ ಅವರನ್ನು ಸನ್ಮಾನಿಸಲಾಯಿತು.