ನಾಪೆÇೀಕ್ಲು, ಮೇ 16: ನಾಪೆÇೀಕ್ಲು ಪಟ್ಟಣ ಸೇರಿದಂತೆ ವ್ಯಾಪ್ತಿಯ ಕೊಳಕೇರಿ, ಕುಂಜಿಲ, ಕಕ್ಕಬ್ಬೆ, ನೆಲಜಿ ಮತ್ತಿತರ ಕಡೆಗಳಲ್ಲಿ ಗುರುವಾರ ಅಪರಾಹ್ನ ಆಲಿಕಲ್ಲು ಸಮೇತ ಭಾರೀ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.

ಅಪರಾಹ್ನ 3.30 ರಿಂದ 4.30 ವರೆಗೆ ನಾಪೆÇೀಕ್ಲು ಪಟ್ಟಣಕ್ಕೆ 25 ಮಿ.ಮೀ, ಕೊಳಕೇರಿಗೆ 35 ಮಿ.ಮೀ, ಕುಂಜಿಲಕ್ಕೆ 50 ಮಿ.ಮೀ ಮಳೆ ಸುರಿದಿದ್ದು, ಮಳೆಯೊಂದಿಗೆ ರಭಸದ ಗಾಳಿ ಮತ್ತು ಭೂಮಿಗೆ ಹರಡಿದಂತೆ ಆಲಿಕಲ್ಲು ಸುರಿದಿರುವದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಮ್ಮಂಗೇರಿ ಮತ್ತು ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಸುತ್ತ ಮುತ್ತ 50 ಮಿ.ಮೀ. ಮಳೆ ಮತ್ತು ಭಾರೀ ಆಲಿಕಲ್ಲು ಬಿದ್ದರುವ ಬಗ್ಗೆ ಕಣಿಯರ ನಾಣಯ್ಯ `ಶಕ್ತಿ’ಗೆ ತಿಳಿಸಿದ್ದಾರೆ. ಮಳೆಯಿಂದ ಇಳೆ ತಂಪಾಗಿರುವ ಸಂತಸ ಒಂದೆಡೆಯಾದರೆ, ಆಲಿಕಲ್ಲಿನ ರಭಸಕ್ಕೆ ರೈತರು ಬೆಳೆಸಿದ ತರಕಾರಿ ಬೆಳೆಗಳು ಸಂಪೂರ್ಣ ನೆಲಕಚ್ಚಿರುವದು ಬೇಸರ ತಂದಂತಾಗಿದೆ. ಮಳೆ, ಗಾಳಿಯ ರಭಸಕ್ಕೆ ಸಣ್ಣ ಪುಟ್ಟ ಮರದ ಕೊಂಬೆಗಳು ಮುರಿದು ಬಿದ್ದಿರುವದು ಹೊರತುಪಡಿಸಿ ಹೆಚ್ಚಿನ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಸಿದ್ದಾಪುರ, ನೆಲ್ಲಿಹುದಿಕೇರಿ, ಅಭ್ಯತ್‍ಮಂಗಲ, ಸುಂಟಿಕೊಪ್ಪ ಇನ್ನಿತರೆಡೆಗಳಲ್ಲಿಯೂ ಆಲಿಕಲ್ಲು ಸಹಿತ ಮಳೆಯಾಗಿದೆ.