ನಾಪೆÇೀಕ್ಲು, ಮೇ 15: ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಒಳ್ಳೆಯ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ಹಾಕಿ ಅಸೋಸಿಯೇಶನ್ ಉಪಾಧ್ಯಕ್ಷ ಅರೆಯಡ ಪವಿನ್ ಪೆÇನ್ನಣ್ಣ ಅಭಿಪ್ರಾಯಪಟ್ಟರು.
ಸಮೀಪದ ಪೇರೂರು ಗ್ರಾಮದ ಪೇರೂರಿಯನ್ಸ್ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಹಾಕಿ, ಬೊಳ್‍ಕಾಟ್, ಉಮ್ಮತ್ತಾಟ್ ಮುಂತಾದವಗಳನ್ನು ಕಲಿಸುತ್ತಿರುವದು ಶ್ಲಾಘನೀಯ. ಇದರಿಂದ ಮಕ್ಕಳ ಆಸಕ್ತಿಯು ಹೆಚ್ಚುತ್ತದೆ ಎಂದರು.
ನಾಪೆÇೀಕ್ಲು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಕಿ ಅಕಾಡೆಮಿ ಅಧ್ಯಕ್ಷ ಕಲಿಯಂಡ ಅಯ್ಯಣ್ಣ ಮಾತನಾಡಿ, ಮಕ್ಕಳು ಆರೋಗ್ಯವಂತರಾಗಲು ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೂವೆರ ಪೆಮ್ಮಯ್ಯ, ಬಡಕಡ ದೀನಾ ಪೂವಯ್ಯ, ಮತ್ತಿತರರು ಮಾತನಾಡಿದರು. ಶಿಬಿರದಲ್ಲಿ ಹಾಕಿ, ಉಮ್ಮತ್ತಾಟ್, ಬೊಳ್‍ಕಾಟ್, ಶೂಟಿಂಗ್ ತರಬೇತಿ ನೀಡಲಾಯಿತು. ತರಬೇತುದಾರರಾಗಿ ಬಾಳೆಯಡ ರಮೇಶ್, ಚೀಯಕಪೂವಂಡ ಮಿಥುನ್ ಚಂಗಪ್ಪ, ತಾಪಂಡ ಮೀನಾ, ಪಾಲೆಯಡ ಲೀನಾ, ಮೇಕ್‍ಮಣಿಯಂಡ ತಮ್ಮಯ್ಯ, ಅಪ್ಪಚ್ಚಿರ ನಂದ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೇರೂರಿಯನ್ಸ್ ಸಮಿತಿ ಆಯೋಜಕ ತಾಪಂಡ ಅಪ್ಪಣ್ಣ ವಹಿಸಿದ್ದರು. ವೇದಿಕೆಯಲ್ಲಿ ಅರೆಯಡ ಸೋಮಪ್ಪ, ಸಮಿತಿ ಸಂಚಾಲಕ ಮಚ್ಚುರ ರವೀಂದ್ರ, ಮತ್ತಿತರರು ಇದ್ದರು.