ಮಡಿಕೇರಿ, ಮೇ 15 : ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಸಂಭವಿಸಿದ ಭೂ ಕುಸಿತ, ಪ್ರವಾಹದಿಂದಾಗಿ ಸಂತ್ರಸ್ತರಾದ ಮೊದಲನೇ ಹಂತದ ಪಟ್ಟಿಯಲ್ಲಿನ ಪೂರ್ಣ, ತೀವ್ರ ವಾಸದ ಮನೆ ಹಾನಿಯಾದ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ಕರ್ಣಂಗೇರಿ ಗ್ರಾಮದ ಸ.ನಂ.178/1ರ 4.80 ಎಕ್ರೆ ಜಾಗದಲ್ಲಿ ನಿರ್ಮಿಸಿರುವ 35 ಮನೆಗಳನ್ನು ಕರ್ಣಂಗೇರಿಯಲ್ಲಿಯೇ ತಮಗೆ ಮನೆಗಳು ಬೇಕೆಂದು ಕೋರಿರುವ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ತಿಳಿಸಿದ್ದಾರೆ.

ಕರ್ಣಂಗೇರಿ ಗ್ರಾಮದ ಸ.ನಂ.178/1 ರಲ್ಲಿ ಅನುಮೋದಿತ ಬಡಾವಣೆ ನಕ್ಷೆಯಂತೆ 35 ಮನೆಗಳನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗಿರುತ್ತದೆ. ಕರ್ಣಂಗೇರಿಯಲ್ಲಿಯೇ ತಮಗೆ ಮನೆ ಬೇಕೆಂದು 106 ಜನ ಸಂತ್ರಸ್ಥರು, ಫಲಾನುಭವಿಗಳು ತಮ್ಮ ಬೇಡಿಕೆಯಲ್ಲಿ ಕೇಳಿರುತ್ತಾರೆ. ಕರ್ಣಂಗೇರಿ ಗ್ರಾಮದ 3 ಜನ ಸಂತ್ರಸ್ಥರು ಮನೆ ಕಳೆದುಕೊಂಡಿದ್ದು, ಆ 3 ಜನರಿಗೆ ಕರ್ಣಂಗೇರಿಯಲ್ಲಿಯೇ ಮನೆ ನೀಡಲಾಗಿದೆ. ಮಕ್ಕಂದೂರು ಗ್ರಾಮದ ಉದಯಗಿರಿ ಭಾಗದಲ್ಲಿ ಬರುವ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲಾಗುತ್ತಿರುವ ಸ್ಥಳಕ್ಕೆ ಕೇವಲ 2 ಕಿ.ಮೀ.ಅಂತರದೊಳಗೆ ಬರುವ ಸಂತ್ರಸ್ಥರಾಗಿರುವದರಿಂದ ಆ 16 ಜನರಿಗೆ ಕರ್ಣಂಗೇರಿಯಲ್ಲಿಯೇ ಮನೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ.

ಉಳಿದ 16 ಮನೆಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕರ್ಣಂಗೇರಿಯಲ್ಲಿ ಮನೆ ಕೋರಿರುವ ಎಲ್ಲಾ ಸಂತ್ರಸ್ತರನ್ನು ಸಭೆಗೆ ಆಹ್ವಾನಿಸಿ, ಅವರ ಸಮ್ಮುಖದಲ್ಲೇ ಲಾಟರಿ ಮೂಲಕ 16 ಜನರನ್ನು ಆಯ್ಕೆ ಮಾಡಲಾಗಿರುತ್ತದೆ.

ಕರ್ಣಂಗೇರಿಯಲ್ಲಿಯೇ ಮನೆ ನೀಡಲಾಗಿರುವ, ಕರ್ಣಂಗೇರಿ ಹಾಗೂ ಮಕ್ಕಂದೂರು ಗ್ರಾಮದ ಉದಯಗಿರಿ ಭಾಗದ ಫಲಾನುಭವಿಗಳ, ಸಂತ್ರಸ್ಥರ ವಿವರ ; ಕರ್ಣಂಗೇರಿಯ ಪ್ರಿಯಾ ವಿಜಯ್ ಕುಮಾರ್(ವಿಜಯ್ ಕುಮಾರ್), ಗೌರಮ್ಮ ಎಚ್.ಜಿ (ಭರತ್), ಅಕ್ಕಮ್ಮ ಬಿ.ಎಂ. (ಮುತ್ತಪ್ಪ), ಉದಯಗಿರಿಯ ಬಿ.ಎಸ್. ಸಂಜೀವ ರೈ (ರಾಮಣ್ಣ), ಬಿ.ಕೆ.ಚಂದ್ರಶೇಖರ್ (ಬಿ. ಕುಟ್ಟಿ ಪೂಜಾರಿ), ಬಿ.ಡಿ.ಪಾರ್ವತಿ (ಧರ್ಮಪ್ಪ), ಪಿ.ಜಯರಾಂ (ಪರಮೇಶ್ವರ), ಜಯಂತಿ, ಒ.ಬಿ. (ಒ.ಕೆ.ಬಾಬು), ಒ.ಕೆ.ಜಾರಪ್ಪ (ಕೊರಗಪ್ಪ) ಮತ್ತು ಶ್ರೀಲತಾ (ಮುತ್ತಪ್ಪ), ಎಂ.ಆರ್.ದೇವಕ್ಕಿ (ರಾಮಣ್ಣ), ಎಂ.ಎ.ರಾಮಣ್ಣ ನಾಯ್ಕ (ಅಣ್ಣು ನಾಯ್ಕ), ಗಣೇಶ್ ಬಿ.ಐ (ಐತಪ್ಪ), ಎಚ್.ಕೆ. ಮನುಕುಮಾರ್ (ಎಚ್.ಆರ್. ಕಾಂತಪ್ಪ), ಬಿ.ಎಸ್. ಪದ್ಮಾವತಿ (ಕೃಷ್ಣಪ್ಪ), ಎಚ್.ಬಿ.ಗಿರಿಜಾ (ಬಾಬು), ಎಂ.ಎ.ರಾಮಚಂದ್ರ (ಅಣ್ಣು ನಾಯ್ಕ), ಬಿ.ಕೆ.ವಿಠಲ (ಕುಟ್ಟಿ ಪೂಜಾರಿ), ಬಿ.ಎ.ಸುಂದರ (ಎಲ್ಯಣ್ಣ ಪೂಜಾರಿ).

ಕರ್ಣಂಗೇರಿಯಲ್ಲಿ ಮನೆ ಬೇಕೆಂದು ಕೋರಿದ್ದ, ಲಾಟರಿ ಮೂಲಕ ಕರ್ಣಂಗೇರಿಗೆ ಆಯ್ಕೆಯಾದ ಫಲಾನುಭವಿಗಳ ಸಂತ್ರಸ್ಥರ ವಿವರ: ಹೆಬ್ಬೆಟಗೇರಿಯ ಎನ್.ಎ.ರಾಜು (ಅಪ್ಪಯ್ಯ), ಮಂಗಳಾದೇವಿನಗರದ ರಾಮಕೃಷ್ಣಾಚಾರಿ (ವೇಲಾಯುಧನ್), ಇಂದಿರಾ ನಗರದ ಕೆ.ಎಂ.ಶಿವಶೇಖರ್ (ಮಾಧವನ್), ಯಶೋಧಾ ಕೆ. (ನಾರಾಯಣ), ಚಾಮುಂಡೇಶ್ವರಿ ನಗರದ ನಾಗಮ್ಮ ಪಿ. (ಪಳನಿ), ಮಕ್ಕಂದೂರಿನ ಬಲ್ಲಾರಂಡ ಎ.ಚಂಗಪ್ಪ (ಮೊಣ್ಣಪ್ಪ), ಇಂದಿರಾನಗರದ, ರಾಮಕೃಷ್ಣ (ನಾರಾಯಣ), ಮಕ್ಕಂದೂರಿನ ಕೆ.ಎಸ್.ಹೇಮಾವತಿ (ಸೋಮಯ್ಯ), ಹೆಬ್ಬೆಟಗೇರಿಯ ಬಿ.ವಿ.ರೋಹಿಣಿ (ವಾಸು ಬಿ.ಜೆ), ಕಾಟಕೇರಿಯ ರವಿ ಎಂ.ಬಿ. (ಬೊಳ್ಳು), ಮಕ್ಕಂದೂರಿನ ಎಸ್.ಯು.ವಿಜಯ್ ಕುಮಾರ್ (ಎಸ್.ಸಿ.ಉತ್ತಯ್ಯ, ಹೆಬ್ಬೆಟಗೇರಿಯ ಬಿ.ಎ.ಆನಂದ (ಅಣ್ಣಿಪೂಜಾರಿ), ಇಂದಿರಾನಗರದ ಮೇರಿ ಕೆ.ವಿ. (ಪ್ರಮೋದ್), ಹೆಬ್ಬೆಟ್ಟಗೇರಿ ಚೆರಿಯಮನೆ ಬೋಪಯ್ಯ (ಅಚ್ಚಯ್ಯ), ಮಕ್ಕಂದೂರು ಸಾಲಪ್ಪ ಡಿಸೋಜ (ಬಾಬು ಡಿಸೋಜ), ಹಾಗೂ ಶಿವಪ್ಪ ಬಿ.ಕೆ. (ಕೃಷ್ಣಪ್ಪ).