ಗೋಣಿಕೊಪ್ಪ ವರದಿ, ಮೇ 15 : ನೂತನವಾಗಿ ಘೋಷಿಸಲ್ಪಟ್ಟಿರುವ ಪೊನ್ನಂಪೇಟೆ ತಾಲೂಕಿಗೆ ತಹಶೀಲ್ದಾರ್ ನೇಮಕ ಮಾಡಲು ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ಶಾಸಕ ಕೆ. ಜಿ ಬೋಪಯ್ಯ ಭರವಸೆ ನೀಡಿದರು.

ಪೊನ್ನಂಪೇಟೆ ಹಳೆಯ ಕೊಡಗು ಮೀಟರ್ಸ್ ಕಟ್ಟಡದಲ್ಲಿ ತಾಲೂಕು ಕಚೇರಿ ಪ್ರಾರಂಭಿಸಲು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ಹಿರಿಯ ನಾಗರಿಕ ವೇದಿಕೆ ಪ್ರಮುಖರೊಂದಿಗೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭ ಅವರು ಮಾತನಾಡಿದರು.

ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ ಮಾತನಾಡಿ, ಈ ಕಟ್ಟಡದಲ್ಲಿ ತಾಲೂಕು ಕಚೇರಿ ಪ್ರಾರಂಭಿಸಲು ನಮ್ಮ ವೇದಿಕೆಯಿಂದ ಒಂದಷ್ಟು ಸ್ವಚ್ಚತೆ ನಡೆಸಲಾಗಿದೆ. ಆವರಣದಲ್ಲಿದ ಗಿಡ ಗಂಟಿಗಳನ್ನು ತೆಗೆದುಹಾಕಲಾಗಿದೆ. ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸವಾಗಬೇಕಾಗಿದೆ. ಈ ಕಟ್ಟಡದಲ್ಲಿ ತಾಲೂಕು ಕಚೇರಿ ಮಾಡಲು ಎಲ್ಲಾ ಸೌಕರ್ಯಗಳಿದ್ದು, ಅಧಿಕಾರಿ ನೇಮಕ ಮಾತ್ರ ಅವಶ್ಯಕತೆ ಇದೆ. ತಾಲೂಕು ಶೀಘ್ರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರದೊಂದಿಗೆ ವ್ಯವಹರಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಹಿರಿಯ ನಾಗರಿಕ ವೇದಿಕೆಯ ಪ್ರಮುಖರುಗಳಾದ ಚೆಪ್ಪುಡಿರ ಸೋಮಯ್ಯ, ಮೂಕಳೇರ ಕುಶಾಲಪ್ಪ, ಪೊನ್ನಂಪೇಟೆ ಗ್ರಾ.ಪಂ ಸದಸ್ಯ ಹ್ಯಾರಿಸ್, ಪೊನ್ನಂಪೇಟೆ ಬ್ಲಾಕ್ ಬಿ.ಜೆ.ಪಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ ಹಾಜರಿದ್ದರು.