ಕುಶಾಲನಗರ, ಮೇ 15: ಕುಶಾಲನಗರದ ಆರ್ಯವೈಶ್ಯ ಮಂಡಳಿ ಮತ್ತು ವಾಸವಿ ಯುವಜನ ಸಂಘದ ಆಶ್ರಯದಲ್ಲಿ ವಾಸವಿ ಜಯಂತಿ ಕಾರ್ಯಕ್ರಮ ನಡೆಯಿತು.

ಪಟ್ಟಣದ ವಾಸವಿ ಮಹಲ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದ ವತಿಯಿಂದ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಸ್ಕøತಿಯ ಅನಾವರಣದೊಂದಿಗೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಪರಿಸರಕ್ಕೆ ಪೂರಕವಾದ ಕಾರ್ಯಗಳನ್ನು ಹೆಚ್ಚು ಕೈಗೊಳ್ಳಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಎಸ್.ಎನ್. ನರಸಿಂಹಮೂರ್ತಿ ಮಾತನಾಡಿ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತ್ಯಂತ ಹೆಚ್ಚಿನ ತೆರಿಗೆ ಆರ್ಯವೈಶ್ಯ ಸಮುದಾಯದವರಿಂದ ದೊರಕುತ್ತಿದೆ. ಆದರೂ ಸಮುದಾಯದವರಿಗೆ ಸರ್ಕಾರ ಯಾವದೇ ಸೌಲಭ್ಯ ಒದಗಿಸಿಲ್ಲ. ಜನಾಂಗವನ್ನು ಮತ್ತು ಜನಸಂಖ್ಯೆಯನ್ನು ಸರ್ಕಾರ ಪರಿಗಣಿಸಿ ಸೂಕ್ತ ರಾಜಕೀಯ ಸ್ಥಾನಮಾನ ನೀಡಬೇಕೆಂದರು.

ಖಾದಿ ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ ಕೆ.ಬಿ. ವೇಣುಗೋಪಾಲ್, ಮಹಾಸಭಾದ ಜಿಲ್ಲಾ ಅಧ್ಯಕ್ಷ ನಾಗೇಂದ್ರಪ್ರಸಾದ್ ಮಾತನಾಡಿದರು. ವಾಸವಿ ಯುವತಿ ಮಂಡಳಿ ಅಧ್ಯಕ್ಷೆ ಶ್ರೀಲಕ್ಷ್ಮಿ ರವಿಚಂದ್ರ, ಕನ್ನಿಕಾ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ರವಿಕುಮಾರ್, ಆರ್ಯವೈಶ್ಯ ಮಂಡಳಿ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾಸತ್ಯ, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಎನ್. ನಾಗಪ್ರವೀಣ್, ಕಾರ್ಯದರ್ಶಿ ಅರ್ಜುನ್ ಗುಪ್ತ, ಆರ್ಯವೈಶ್ಯ ಮಂಡಳಿ ಯುವ ಪರಿಷತ್ ಉಪಾಧ್ಯಕ್ಷ ವಿ.ಆರ್. ಮಂಜುನಾಥ್ ಇದ್ದರು.

ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಮಹಿಳೆಯೊಬ್ಬರಿಗೆ ಕನ್ನಿಕಾ ಸಹಕಾರ ಸಂಘದಿಂದ ಆರ್ಥಿಕ ಸಹಕಾರ ನೀಡಲಾಯಿತು. ಕೆ. ಪ್ರವೀಣ್ ಸ್ವಾಗತಿಸಿ, ಪಿ.ಎಸ್. ಚೇತನ್ ವಂದಿಸಿದರು.