ಗೋಣಿಕೊಪ್ಪಲು, ಮೇ 15: ರೋಟರಿ ಗೋಣಿಕೊಪ್ಪಲು ವತಿಯಿಂದ ಪೊನ್ನಪ್ಪಸಂತೆ ಅಂಗನವಾಡಿ ಕೇಂದ್ರಕ್ಕೆ ನೀರಿನ ಫಿಲ್ಟರ್, ಹೊದಿಕೆ, ಕುರ್ಚಿ ಹಾಗೂ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಅಂಗನವಾಡಿ ಶಿಕ್ಷಕಿ ರೋಹಿಣಿ ವಸ್ತುಗಳನ್ನು ಸ್ವೀಕರಿಸಿದರು. ರೋಟರಿ ಅಧ್ಯಕ್ಷ ದಿಲನ್ ಚಂಗಪ್ಪ, ವಾಸು ಉತ್ತಪ್ಪ ಹಾಗೂ ಪ್ರಮೋದ್ ಕಾಮತ್ ಇದ್ದರು.