ಸೋಮವಾರಪೇಟೆ, ಮೇ 15: ಸಿದ್ದಲಿಂಗಪುರದ ಅರಶಿನಗುಪ್ಪೆ ಶ್ರೀ ಮಂಜುನಾಥ ದೇಗುಲದಲ್ಲಿರುವ ಶ್ರೀನಾಗ ಸನ್ನಿಧಿ ಯಲ್ಲಿ ಪಂಚಮಿ ಪೂಜೆ ನಡೆ ಯಿತು. ನಾಗ ದೇವರಿಗೆ ಬೆಳಗ್ಗಿ ನಿಂದಲೇ ವಿಶೇಷ ಪೂಜೆ, ಅಭಿಷೇಕಗಳನ್ನು ನಡೆಸಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.

ದೇವಾಲಯದ ಪ್ರಧಾನ ಗುರುಗಳಾದ ಶ್ರೀರಾಜೇಶ್‍ನಾಥ್ ಗುರೂಜಿ, ಅರ್ಚಕರುಗಳಾದ ಜಗದೀಶ್ ಉಡುಪ, ವಾದಿರಾಜ್ ಅವರುಗಳ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು