ಕೂಡಿಗೆ, ಮೇ 15: ಕೂಡಿಗೆ ಗ್ರಾ.ಪಂ.ನ ಒಂದನೇ ವಾರ್ಡಿನ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಇಂದು ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಈ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಈ ಸ್ಥಾನಕ್ಕೆ ಅಣ್ಣಯ್ಯ, ಹರೀಶ್, ಕೃಷ್ಣ ಎಂಬವರುಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಯು ತಾ. 29ರಂದು ನಡೆಯಲಿದೆ.