ಮಡಿಕೇರಿ, ಮೇ 13: ವೀರಾಜ ಪೇಟೆ ತಾಲೂಕು ಬಾಳುಗೋಡು ಗ್ರಾಮದಲ್ಲಿ ಅಪರೂಪದ ಶಿವನ ವಿಗ್ರಹ ಪತ್ತೆಯಾಗಿದ್ದು, ಯುವ ಬ್ರಿಗೇಡ್ ವತಿಯಿಂದ ಅದರ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವಿಗ್ರಹ ಪುರಾತನ ಇತಿಹಾಸ ಹೊಂದಿದೆ. ಸ್ವಚ್ಛತಾ ಕಾರ್ಯದಲ್ಲಿ ಯುವ ಬ್ರಿಗೇಡ್ ಪ್ರಮುಖರಾದ ಪೊಕ್ಕಳಿಚಂಡ ಕುಲ್‍ದೀಪ್ ಪೂಣಚ್ಚ, ಮಾಚೆಟ್ಟಿರ ಸಚಿನ್ ಮಂದಣ್ಣ, ಅಚ್ಚಪಂಡ ಪೃಥ್ವಿ, ಚೇಂದಂಡ ಗೌತಮ್, ಪಾಡೆಯಂಡ ಲೋಕೇಶ್, ಪಾಡೆಯಂಡ ರೋಷನ್ ಪಾಲ್ಗೊಂಡಿದ್ದರು.