ಸುಂಟಿಕೊಪ್ಪ, ಮೇ 14: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಉಪದೇವರುಗಳಾದ ನಾಗನಗುಡಿ ನಿರ್ಮಾಣಕ್ಕೆ ಕಟ್ಟಡ ಗುತ್ತಿಗೆದಾರ ಆನಂದ ಅವರು ಮುಂಗಡ ಹಣ ರೂ. 50,000 ವನ್ನು ಜೀರ್ಣೋ ದ್ಧಾರ ಸಮಿತಿಗೆ ನೀಡಿದರು. ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿ ಯಲ್ಲಿದ್ದು ಉಪ ದೇವರುಗಳಾದ ನಾಗನ ಗುಡಿ ಅಂದಾಜು ರೂ. 1,50,000 ವೆಚ್ಚವಾಗಲಿದೆ. ಇದನ್ನು ಕಟ್ಟಡ ಗುತ್ತಿಗೆ ದಾರ ಭರಿಸಲಿದ್ದು ಮುಂಗಡವಾಗಿ ರೂ. 50 ಸಾವಿರ ಹಣವನ್ನು ಸಮಿತಿಯ ಅಧ್ಯಕ್ಷ ವೈ.ಎಂ. ಕರುಂಬಯ್ಯ ಅವರಿಗೆ ನೀಡಿದರು. ಈ ಸಂದರ್ಭ ಸದಸ್ಯರುಗಳಾದ ಜೆ.ಎನ್. ಚಂದ್ರಶೇಖರ್, ಆರ್. ರಮೇಶ್ ಪಿಳ್ಳೆ, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಸುರೇಶ್ ಗೋಪಿ ಇದ್ದರು.