*ಸಿದ್ದಾಪುರ, ಮೇ 14: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಗೆ ಸೇರಿದ ಅಭ್ಯತ್‍ಮಂಗಲ ಪೈಸಾರಿಯಲ್ಲಿರುವ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ತಾ.ಪಂ. ಇಓ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಸದೇಶ, ಸದಸ್ಯರುಗಳಾದ ಅಂಚೆಮನೆ ಸುಧಿ ಹಾಗೂ ಬಿ.ಟಿ. ಯಶೋಧ ತಿಳಿಸಿದ್ದಾರೆ.

ಗ್ರಾ.ಪಂ.ನಿಂದ ಅಂಗನವಾಡಿ ಕಟ್ಟಡದ ಬಾಗಿಲು, ಕಿಟಕಿ ದುರಸ್ತಿ, ಕುಡಿಯುವ ನೀರಿಗೆ ಅನುದಾನ ಸೇರಿದಂತೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದ್ದಾರೆ.