ಶ್ರೀಮಂಗಲ, ಮೇ 14 : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡವ ಕುಟುಂಬಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಮರೆನಾಡ್ ಕೊಡವ ಕಪ್ ಪಂದ್ಯಾವಳಿಗೆ ಹಿರಿಯ ಕ್ರೀಡಾಪಟು ಕೀಕಿರ ನಂದಾ ಸುಬ್ಬಯ್ಯ ಅವರು ಬ್ಯಾಟಿಂಗ್ ಮಾಡುವ ಮೂಲಕ ಮತ್ತು ಬೆಂಗಳೂರಿನ ಮರೆನಾಡು ಕೊಡವ ಸಮಾಜದ ಮಾಜಿ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ ಅವರು ಬೌಲಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.ಬಿರುನಾಣಿಯ ಮರೆನಾಡು ಪ್ರೌಢಶಾಲೆಯ ಮೈದಾನದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾಟದಲ್ಲಿ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 14 ಕೊಡವ ಕುಟುಂಬಗಳು ಪಾಲ್ಗೊಂಡಿವೆ. ಉದ್ಘಾಟಿಸಿ ಮಾತನಾಡಿ ಕೀಕಿರ ನಂದಾ ಸುಬ್ಬಯ್ಯ ಅವರು ಮಾತನಾಡಿ ಗ್ರಾಮೀಣ ಭಾಗವಾದ ಬಿರುನಾಣಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಿರುವದು ಸಂತಸದ ವಿಷಯವಾಗಿದೆ. ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗುತ್ತದೆ. ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಇಂತಹ ಪಂದ್ಯಾವಳಿಗಳು ನಡೆಯುವಂತಾಗಲಿ ಎಂದು ಹೇಳಿದರು.
ಕಾಳಿಮಾಡ ಮುತ್ತಣ್ಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾವಳಿಗಳನ್ನು ಆಯೋಜಿಸುವಾಗ ಆರ್ಥಿಕ ಕ್ರೋಢಿಕರಣದ ಸಮಸ್ಯೆ ಉಂಟಾಗುತ್ತದೆ. ಆದರೆ ಇವುಗಳಿಗೆ ಹಿಂಜರಿಯದೆ ಉತ್ತಮ ಕೆಲಸಗಳಿಗೆ ಪ್ರಯತ್ನ ಮಾಡಿದರೆ ಇಲ್ಲಿನ ಜನರು ಎಲ್ಲಾ ಸಹಕಾರಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇಲ್ಲಿನ ತಂಡಗಳು ಬಹಳ ದೂರದ ಊರಿಗೆ ಹೋಗಿ ಪಂದ್ಯಾವಳಿಯಲ್ಲಿ ಭಾಗವಹಿಸಿರುವದನ್ನು ಕಂಡಿದ್ದೇವೆ. ಆದರೆ ಇದೀಗ ತಮ್ಮ ವ್ಯಾಪ್ತಿಯಲ್ಲಿಯೇ ಪಂದ್ಯಾವಳಿಯನ್ನು ಆಯೋಜಿಸಿರುವದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವಂತಹ ಶೆಟಲ್ ಬ್ಯಾಡ್ಮಿಂಟನ್, ಫುಟ್‍ಬಾಲ್, ಹಾಕಿ, ಕಬ್ಬಡಿ ಇತ್ಯಾದಿ ಪಂದ್ಯಾವಳಿಗಳನ್ನು ಆಯೋಜಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಮರೆನಾಡು ಕೊಡವ ಸಮಾಜದ ಪದಾಧಿಕಾರಿಗಳಾದ ಬೊಳ್ಳೇರ ಅಪ್ಪುಟ ಪೆÇನ್ನಪ್ಪ, ಅಣ್ಣಾಳಮಾಡ ಲಾಲಾ ಅಪ್ಪಣ್ಣ, ಹಿರಿಯರಾದ ಬೊಟ್ಟಂಗಡ ಮಾಚಯ್ಯ, ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಮರೆನಾಡು ಕ್ರೀಡಾ ಸಮಿತಿಯ ಅಧ್ಯಕ್ಷ ಕೀಕಣಮಾಡ ಮನು ಕಾರ್ಯಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಸಮಿತಿ ಸದಸ್ಯರು ಹಾಜರಿದ್ದರು.
ಮಂಗಳವಾರ ನಡೆದ ಪಂದ್ಯಾಟದ ಫಲಿತಾಂಶ
ಉದ್ಘಾಟನಾ ಪಂದ್ಯ ಕುಪ್ಪಣಮಾಡ-ಕಾಳಿಮಾಡ ತಂಡಗಳ ನಡುವೆ ನಡೆಯಿತು. ಕುಪ್ಪಣಮಾಡ ತಂಡ ಮೊದಲು ಬ್ಯಾಟ್ ಮಾಡಿ 5 ವಿಕೆಟ್‍ಗೆ 55 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಕಾಳಿಮಾಡ ತಂಡ 4 ವಿಕೆಟ್‍ಗೆ 56 ರನ್ ಗಳಿಸಿ ವಿಜಯ ಸಾಧಿಸಿತು.
ಬಲ್ಯಮಿದೇರಿರ - ನೆಲ್ಲೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಲ್ಯಮಿದೇರಿರ ತಂಡ 9 ವಿಕೆಟ್ ಕಳೆದುಕೊಂಡು 34 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನೆಲ್ಲೀರ ತಂಡ 2 ವಿಕೆಟ್‍ಗೆ 35ರನ್ ಗಳಿಸಿ ಸುಲಭವಾಗಿ ಜಯ ಸಾಧಿಸಿತು. ಗುಡ್ಡಮಾಡ - ಕಾಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಡ್ಡಮಾಡ ತಂಡ 4 ವಿಕೆಟ್‍ಗೆ 66ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕಾಯಪಂಡ ತಂಡ 1 ವಿಕೆಟ್ ನಷ್ಟಕ್ಕೆ 67ರನ್ ಗಳಿಸಿ ಜಯ ದಾಖಲಿಸಿತು.
ಕರ್ತಮಾಡ - ಅಣ್ಣಳಮಾಡ (ಪೂಕಳ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ತಮಾಡÀ ತಂಡ 5 ವಿಕೆಟ್‍ಗೆ 73ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅಣ್ಣಳಮಾಡ ತಂಡ 7 ವಿಕೆಟ್ ನಷ್ಟಕ್ಕೆ 53ರನ್ ಗಳಿಸಿ ಸೋಲು ಅನುಭವಿಸಿತು.
ದಿನದ ಕೊನೆಯ ಪಂದ್ಯ ಕೀಕಣಮಾಡ - ಬೊಳ್ಳೇರ ತಂಡಗಳ ನಡೆಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೀಕಣಮಾಡ ತಂಡ 6 ವಿಕೆಟ್ ನಷ್ಟಕ್ಕೆ 64ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೊಳ್ಳೇರ ತಂಡ 4 ವಿಕೆಟ್‍ಗೆ 65ರನ್ ಗಳಿಸಿ ಗೆಲವು ಸಾಧಿಸಿ ಕ್ವಾಟರ್ ಫೈನಲ್‍ಗೆ ಪ್ರವೇಶ ಪಡೆಯಿತು.
ಕ್ವಾಟರ್ ಫೈನಲ್ : ಬುಧವಾರ (ಇಂದು) ಕ್ವಾಟರ್ ಫೈನಲ್ ಪಂದ್ಯಾವಳಿಯಲ್ಲಿ ಕಾಳಿಮಾಡ - ಅಣ್ಣಳಮಾಡ (ಬಿರುನಾಣಿ), ಕಳಕಂಡ - ನೆಲ್ಲೀರ, ಕಾಯಪಂಡ-ಬೊಟ್ಟಂಗಡ, ಕರ್ತಮಾಡ - ಬೊಳ್ಳೇರ ತಂಡಗಳು ಸೆಣಸಲಿವೆ.