ಮಡಿಕೇರಿ, ಮೇ 14: 2018-19ನೇ ನೇಮಕಾತಿ ಪ್ರಕ್ರಿಯೆಯಡಿ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ದೇಹದಾಢ್ರ್ಯ ಪರೀಕ್ಷೆ ಇಂದು ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು. ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಪರೀಕ್ಷೆ ನಡೆಸಲಾಯಿತು. 26 ಪುರುಷ ಹಾಗೂ 7 ಮಹಿಳಾ ಸಿಬ್ಬಂದಿ ಸೇರಿದಂತೆ 33 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಲಿಖಿತ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಉತ್ತೀರ್ಣರಾಗಿರುವ 162 ಮಂದಿಯನ್ನು ದೇಹದಾಢ್ರ್ಯ ಹಾಗೂ ಸಹಿಷ್ಣುತೆ ಪರೀಕ್ಷೆಗೆ ಒಳಪಡಿಸಲಾಯಿತು.ಶಿಬಿರದ ನೇತೃತ್ವ ವಹಿಸಿದ್ದ ಜಿಲ್ಲಾ ಪೊಲೀಸ್ ಉನ್ನಾತಾಧಿಕಾರಿ ಡಾ. ಸುಮನ್ ಡಿ. ಪಿ. ಅವರು, ಯುವಕರು ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮುಂದಿನ ವರ್ಷವೂ ನೇಮಕಾತಿಗೆ ಅವಕಾಶವಿದೆ. ಆದಿವಾಸಿ ಜನಾಂಗದವರಿಗೂ ವಿಶೇಷ ಆದ್ಯತೆಯಿದ್ದು, ಅವರುಗಳು ಕೂಡ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ನೇಮಕಾತಿ ಪ್ರಕ್ರಿಯೆ ಇದ್ದ ಹಿನ್ನೆಲೆಯಲ್ಲಿ ಬಿಗಿ ಬಂದೋ ಬಸ್ತ್‍ನೊಂದಿಗೆ ಬೆಳಗ್ಗಿನ ಜಾವ ವ್ಯಾಯಾಮ ಹಾಗೂ ಆಟವಾಡಲು ಬಂದಿದ್ದ ಮಕ್ಕಳನ್ನು ಪೊಲೀಸರು ಕೆಳಗಿನ ಮೈದಾನಕ್ಕೆ ಕಳುಹಿಸುತ್ತಿದ್ದುದು ಕಂಡು ಬಂದಿತು.