ಮಡಿಕೇರಿ, ಮೇ 14: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರ ಬಾಳಿನಲ್ಲಿ ಬೆಳಕಾಗಿ ಬರುವಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ವೃತ್ತಿ ಕೌಶಲ್ಯ ಶಿಕ್ಷಣವನ್ನು ಉಚಿತವಾಗಿ ನೀಡಲಿದ್ದು, ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿಯನ್ನು ನೀಡಲು ಮುಂದೆ ಬಂದಿದೆ. ಉದ್ಘಾಟನಾ ಸಮಾರಂಭ ತಾ. 15 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಶ್ರೀ ಸದ್ಗುರು ಕೈಗಾರಿಕಾ ತರಬೇತಿ ಸಂಸ್ಥೆ, ಶ್ರೀನಿಕೇತನ್, ಖಾಸಗಿ ಬಸ್ ನಿಲ್ದಾಣ ಬಳಿಯ ಮಡಿಕೇರಿಯಲ್ಲಿ ನಡೆಯಲಿದೆ.