ಮಡಿಕೇರಿ, ಮೇ 12: ಸುಂಟಿಕೊಪ್ಪ ಜೆಸಿಐ ಸಂಸ್ಥೆಯಿಂದ ವತಿಯಿಂದ ಸಂಸದೀಯ ನಡಾವಳಿಗಳನ್ನು ನಡೆಸುವದು ಹೇಗೆ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಸುಂಟಿಕೊಪ್ಪದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಸೆನೆಟರ್ ಎಲ್ ರಾಮನಾಥನ್ ಅವರು ತರಬೇತಿ ನೀಡಿದರು. ಸಭೆ ಸಮಾರಂಭಗಳನ್ನು ನಡೆಸುವದು, ಸಭಾಧ್ಯಕ್ಷತೆ ವಹಿಸುವದು, ಸಂಸತ್ತಿನಲ್ಲಿ ಕಲಾಪಗಳನ್ನು ಹೇಗೆ ನಡೆಯುತ್ತದೆ, ನಮ್ಮ ಸಂಘ ಸಂಸ್ಥೆಗಳ ಸಭೆಗಳು ಯಶಸ್ವಿಯಾಗುತ್ತಿಲ್ಲ ಕಾರಣವೇನು, ಸಭೆಯ ಅಧ್ಯಕ್ಷತೆಯನ್ನು ವಹಿಸಿದವನ ಕರ್ತವ್ಯಗಳೇನು, ಸಭೆಯಲ್ಲಿ ಸಭಿಕರ ಪಾತ್ರವೇನು, ಎಂಬ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮ ದಲ್ಲಿ ವಲಯ ತರಬೇತುದಾರರಾದ ಡೆನ್ನಿಸ್ ಡಿಸೋಜ, ಮುಖ್ಯ ಅತಿಥಿಯಾಗಿ ಮಾಜಿ ವಲಯ ಉಪಾಧ್ಯಕ್ಷ ಮಧೂಶ್ ಪೂವಯ್ಯ, ಗೌರವ ಅತಿಥಿಗಳಾಗಿ ವಲಯ ಉಪಾಧ್ಯಕ್ಷ ಪ್ರವೀಣ್, ಸುಂಟಿಕೊಪ್ಪ ಜೆಸಿಐ ಘಟಕದ ಅಧ್ಯಕ್ಷ ಅಶೋಕ್ ನಿಡ್ಯಮಲೆ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ, ಗೋಣಿಕೊಪ್ಪಲು ಜೆಸಿಐ ಘಟಕದಿಂದ ಅಧ್ಯಕ್ಷರು ಹಾಗೂ ಸದಸ್ಯರುಗಳು ಪಾಲ್ಗೊಂಡು ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.