ಕೂಡಿಗೆ, ಮೇ. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೇಹೊಸೂರು ಗ್ರಾಮದ ಹುಣಸೇಪಾರೆ, ಭುವನಗಿರಿ, ಗಂಗೇ ಕಲ್ಯಾಣ ಗ್ರಾಮ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ವ್ಯಾಪ್ತಿಗೆ ಕಾಡಾನೆಗಳು ಬರುತ್ತಿದ್ದು, ಬೀದಿ ದೀಪವಿಲ್ಲದ ಕಾರಣ ಸಾರ್ವಜನಿಕರು ನಡೆದಾಡಲು ಅನಾನುಕೂಲ ವಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರು ಬೀದಿ ದೀಪಗಳನ್ನು ಸಮರ್ಪಕವಾಗಿ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.