ಗೋಣಿಕೊಪ್ಪಲು, ಮೇ 13: ಗೋಣಿಕೊಪ್ಪಲುವಿನ ಚೆಲ್ಸಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಡೆದ ಹೊನಲು ಬೆಳಕಿನ ಪ್ರೀಮಿಯಂ ಲೀಗ್ ಫುಟ್ ಬಾಲ್‍ನ ಫೈನಲ್‍ನಲ್ಲಿ ಸೈಕ್ಲೋನ್ ತಂಡವು 4-1 ಗೋಲುಗಳಿಂದ ನೆಹರು ಎಫ್‍ಸಿ ತಂಡವನ್ನು ಮಣಿಸಿ ರೂ. 17,777 ನಗದು ಹಾಗೂ ಗೋಣಿಕೊಪ್ಪಲು, ಮೇ 13: ಗೋಣಿಕೊಪ್ಪಲುವಿನ ಚೆಲ್ಸಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಡೆದ ಹೊನಲು ಬೆಳಕಿನ ಪ್ರೀಮಿಯಂ ಲೀಗ್ ಫುಟ್ ಬಾಲ್‍ನ ಫೈನಲ್‍ನಲ್ಲಿ ಸೈಕ್ಲೋನ್ ತಂಡವು 4-1 ಗೋಲುಗಳಿಂದ ನೆಹರು ಎಫ್‍ಸಿ ತಂಡವನ್ನು ಮಣಿಸಿ ರೂ. 17,777 ನಗದು ಹಾಗೂ ಪ್ರೀಮಿಯರ್ ಲೀಗ್ ಫುಟ್‍ಬಾಲ್ ಪಂದ್ಯಾಟವು ಭಾನುವಾರ ಮಧ್ಯರಾತ್ರಿಯ ಅಂತಿಮ ಹಣಾಹಣಿಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿತು. ತುಂತುರು ಮಳೆಯ ನಡುವೆ ಕ್ರೀಡಾಪಟುಗಳು ತಮ್ಮ ಪ್ರದರ್ಶನ ತೋರಿದರು.

ಮೊದಲ ಬಾರಿಗೆ ನಗರದಲ್ಲಿ ಆಯೋಜನೆಗೊಂಡಿದ್ದ ಪಂದ್ಯಾಟದಲ್ಲಿ ವಿಜೇತರಿಗೆ ದಾನಿಗಳು, ಸಮಾಜ ಸೇವಕ ಮೀನು ಉಂಬಯಿ ಬಹುಮಾನ ವಿತರಿಸಿದರು. ಐಪಿಎಲ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ 12 ತಂಡಗಳು ಪಾಲ್ಗೊಂಡಿದ್ದವು.

ಚೆಲ್ಸಿ ಸ್ಪೋಟ್ರ್ಸ್ ಕ್ಲಬ್ ಸೇರಿದಂತೆ ಹಿಂದೂಸ್ಥಾನ್, ಮಡ್ ಹಂಟರ್ಸ್, ಸೈಕ್ಲೋನ್ ಎಫ್‍ಸಿ, ರಾಮ ಫ್ರೆಂಡ್ಸ್, ಭಗತ್‍ಸಿಂಗ್, ಎಸ್.ಬಿ. ರಾಕರ್ಸ್, ಉಂಬಯಿ ಎಫ್‍ಸಿ, ಫ್ರೆಂಡ್ಸ್ ಎಫ್‍ಸಿ, ನೆಹರು ಎಫ್‍ಸಿ, ಟೀಮ್ 3 ಎಸ್‍ಕೆ ಅರ್ವತೊಕ್ಲು ಹಾಗೂ ಅನುಗ್ರಹ ಎಫ್‍ಸಿ ತಂಡಗಳು ಸೆಣಸಾಟ ನಡೆಸಿದವು. ಚೆಲ್ಸಿ ಸ್ಪೋಟ್ರ್ಸ್ ಕ್ಲಬ್, ಮೂರನೇ ಸ್ಥಾನ ಹಾಗೂ ಟೀಮ್ 3 ಎಸ್‍ಕೆ ಅರುವತೋಕ್ಲು ನಾಲ್ಕನೇ ಸ್ಥಾನ ಪಡೆದವು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರಾದ ಮೀನು ಉಂಬಯಿ, ಪತ್ರಕರ್ತ ಹೆಚ್.ಕೆ. ಜಗದೀಶ್, ಹಿರಿಯರಾದ ಜಿಮ್ಮಿ ಅಯ್ಯಣ್ಣ, ಹಾಗೂ ಬಿಎಸ್‍ಎನ್‍ಎಲ್ ನೌಕರ ಮಣಿಯ ಅವರನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅನುಗ್ರಹ ಯುವಕ ಸಂಘದ ಕಿರಣ್, ಬಸ್ ಮಾಲೀಕರಾದ ಅಮೃತ ರಾಜಣ್ಣ, ಛಾಯಾಚಿತ್ರ ಸಂಘದ ಅದ್ಯಕ್ಷ ಮೈಕಲ್, ಜುಮಾಮಸೀದಿ ಅಧ್ಯಕ್ಷ ಬಶೀರ್, ಆಲ್ಫೀಯಾ ಮೊಬೈಲ್ ಶಾಪ್‍ನ ಅಪ್ಸರ್,ಚೆಲ್ಸಿ ಸ್ಪೋಟ್ರ್ಸ್‍ಕ್ಲಬ್‍ನ ಅಧ್ಯಕ್ಷರಾದ ಕೀರ್ತಿ ಮೊದಲಾದವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ರಾಜರೈ ಹಾಗೂ ಶಶಿ ಕಾರ್ಯನಿರ್ವಹಿಸಿದರು. ಭಗತ್‍ಸಿಂಗ್ ಯುವಕ ಸಂಘದ ಅಧ್ಯಕ್ಷ ಸಿಂಗಿ ಸತೀಶ್ ಸ್ವಾಗತಿಸಿ, ಡಾಡು ಜೋಸೆಪ್ ವಂದಿಸಿದರು.