ಕೂಡಿಗೆ, ಮೇ 12: ಸಮಾನತೆ ಮತ್ತು ಸಮಾಜ ಸುಧಾರಣೆಗೆÉ ವಚನಕಾರರು ತಮ್ಮ ಮೌಲ್ಯಯುತ ವಚನಗಳ ಮೂಲಕ ಕ್ರಾಂತಿ ನಡೆಸಿದರು ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್. ದಿನೇಶ್‍ಕುಮಾರ್ ಹೇಳಿದರು.
ಶ್ರೀ ಕುಲಗುರು ಹರಳಯ್ಯ ಮಹಾ ಒಕ್ಕೂಟದ ಆಶ್ರಯದಲ್ಲಿ ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ ಬಸವಣ್ಣ, ಹರಳಯ್ಯ ಹಾಗೂ ಭಗವಾನ್ ಬುದ್ದ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಉದ್ಯಮಿ ಎಂ.ಕೆ. ದಿನೇಶ್ ಮಾತನಾಡಿ, ಮಕ್ಕಳಲ್ಲಿ ಮೌಲ್ಯಯುತ ಸಂಸ್ಕಾರ ಬಿತ್ತುವ ಕೆಲಸವಾಗಬೇಕು ಎಂದರು. ಸಾಹಿತಿ ಭಾರದ್ವಾಜ್ ಆನಂದತೀರ್ಥ ಮಾತನಾಡಿ, ವ್ಯಾಮೋಹ ತೊರೆದು ತ್ಯಾಗ ಮನೋಭಾವನೆ ಬೆಳೆಸಿಕೊಂಡಲ್ಲಿ ಜೀವನ ಪಾವನವಾಗಲು ಸಾಧ್ಯವಿದೆ ಎಂದರು.
ಶ್ರೀ ಕುಲಗುರು ಹರಳಯ್ಯ ಮಹಾ ಒಕ್ಕೂಟದ ಅಧ್ಯಕ್ಷ ಹೆಚ್.ಎಸ್. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ, ಡಿಎಸ್‍ಎಸ್ ಜಿಲ್ಲಾ ಪ್ರಮುಖರಾದ ಕೆ.ಬಿ. ರಾಜು, ಹೆಚ್.ಪಿ. ಶಿವಕುಮಾರ್, ಮುಳ್ಳುಸೋಗೆ ಗ್ರಾ.ಪಂ. ಸದಸ್ಯ ಎಂ.ಎಸ್. ಶಿವಾನಂದ, ಒಕ್ಕೂಟದ ಪ್ರಮುಖರಾದ ಹೆಚ್.ಎಲ್. ದಿವಾಕರ, ಹೆಚ್.ಜಿ. ಗಣೇಶ್, ವೃದ್ಧಾಶ್ರಮದ ಸತೀಶ್, ಚಂದ್ರಶೇಖರ್ ಮತ್ತಿತರರು ಇದ್ದರು.