ಸುಂಟಿಕೊಪ್ಪ, ಮೇ 12: ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲೆ ಇದರ ವತಿಯಿಂದ ಮಡಿಕೇರಿಯ ಕಾವೇರಿ ಕಲಾಕ್ಷೇತ್ರzಲ್ಲಿ ಡಾ. ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ತಾ. 26 ರಂದು ನಡೆಯಲಿದೆ ಎಂದು ಜಿಲ್ಲಾ ಸಂಘಟನ ಸಂಚಾಲಕ ಹೆಚ್.ಪಿ.ಶಿವಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಕ್ತಿ ವೃಧ್ಧಾಶ್ರಮದ 30 ಮಂದಿಗೆ ವಸ್ತ್ರ ವಿತರಣೆ, ದಲಿತ ಜನಾಂಗದಿಂದ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಕೊಡಗು ದಲಿತ ರತ್ನ ಪ್ರಶಸ್ತಿ. ಸಮಾಜ ಸೇವಕ ಹಾಗೂ ದಲಿತ ಸಂಘರ್ಷ ಸಮಿತಿಯ ಸ್ಥಾಪPರಾದ ಜಯಪ್ಪ ಹಾನಗಲ್ ಅವರಿಗೆ ಸನ್ಮಾನ. ಕೃಷಿ ಇಲಾಖೆ ಅಧಿಕಾರಿ ಎಂ.ಪಿ.ವರದರಾಜು ಅವರಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವದು. ದಿನಾಚರಣೆಯ ಅಂಗವಾಗಿ ಕ್ರೀಡಾಪಟುಗಳಿಗೆ ಮ್ಯಾನ್ಸ್ ಕಾಂಪೌಂಡ್ ಕ್ರೀಡಾಂಗಣದಲ್ಲಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಪಂದ್ಯಾಟಗಳು ನಡೆಯಲಿದೆ ವಿಜೇತರಿಗೆ ನಗದು ಮತ್ತು ಟ್ರೋಫಿ ನೀಡಲಾಗುವದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.