ವೀರಾಜಪೇಟೆ, ಮೇ 12: ಪವಿತ್ರವಾದ ರಂಜಾನ್ ಕೇವಲ ಉಪವಾಸ ವ್ರತವಲ್ಲ. ಈ ಉಪವಾಸ ಮನುಷ್ಯನ ಮನಸ್ಸು, ಶಾರೀರಿಕ ಶುದ್ಧತೆಗೆ ಕಾರಣವಾಗಿದೆ. ಎಂದು ಮೈಸೂರಿನ ಬಸವ ಧ್ಯಾನ ಮಂದಿರದ ಸ್ವಾಮೀಜಿ ಬಸವ ಮೂರ್ತಿ ಹೇಳಿದರು.

ಬಿಳುಗುಂದ ಗ್ರಾಮದಲ್ಲಿ ಉದ್ಯಮಿ ಇಮ್ರಾನ್ ಸಿದ್ಧಿಕ್, ಬಿಳುಗುಂದದÀ ಹಾರೂನ್ ಶೌಕತ್ ಮ್ಯಾನಸನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಇಫ್ತಿಹಾರ್ ಸೌಹಾರ್ದ ಕೂಟದ’ ಅಂಗವಾಗಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಅವರು ಮಾನವ ಕುಲದಲ್ಲಿರುವದು ಎರಡೇ ಜಾತಿ, ಗಂಡು, ಹೆಣ್ಣು ಎಂದು ಬಣ್ಣಿಸಿದರು. ಸಭೆಯಲ್ಲಿ ಮೌಲಾನಾ ಸೂಫಿ, ಮುಕ್ತಾರ್ ನೂರಿ ಮತ್ತಿತರರು ಭಾಗವಹಿಸಿದ್ದರು. ಇಫ್ತಿಹಾರ್ ಸೌಹಾರ್ದ ಕೂಟದಲ್ಲಿ ವೀರಾಜಪೇಟೆ ಮುಸ್ಲೀಂ ಬ್ಯಾಂಕ್ ಅಧ್ಯಕ್ಷ ಮಹಮ್ಮದ್ ಸೋಹೆಬ್, ಮಾಜಿ ಅಧ್ಯಕ್ಷ ಎಸ್.ಎಚ್. ಮೈನುದ್ದೀನ್ ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಎಚ್.ಮತೀನ್, ಮಹಮ್ಮದ್ ರಾಫಿ ಬಿಳುಗುಂದ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.