ಸುಂಟಿಕೊಪ,್ಪ ಮೇ 12: ಸಂತ ವಿನ್ಸೆಂಟ್ ಪೊಲೈಟ್ ಸಭೆಯಲ್ಲಿ ಧರ್ಮಗುರುಗಳ ಶಿಕ್ಷಣವನ್ನು ಪಡೆದುಕೊಂಡಿದ್ದ ಪ್ರಾನ್ಸಿಸ್ ಜಾಕ್ಸನ್ ಅವರಿಗೆ ಮೈಸೂರಿನ ಧರ್ಮಾಧ್ಯಕ್ಷ ಕೆ.ಎ.ವಿಲಿಯಂ ಅವರಿಂದ ಗುರುಧೀಕ್ಷೆಯನ್ನು ಪಡೆದುಕೊಂಡರು. ಸುಂಟಿಕೊಪ್ಪದ ಸಂತ ಅಂತೋಣಿ ಧರ್ಮಕೇಂದ್ರದ ಪ್ರಥಮ ಧರ್ಮಗುರುವಾಗಿ ಯಾಜಕ ದೀಕ್ಷೆಗೆ ಪ್ರಾನ್ಸಿಸ್ ಜಾಕ್ಸನ್ ಆರ್ಹತೆ ಒಳಗೊಂಡಿದ್ದಕ್ಕೆ ಕ್ರೈಸ್ತ ಭಾಂದವರು ಹರ್ಷವ್ಯಕ್ತಪಡಿಸಿದರು.

ಸಂತ ಅಂತೋಣಿ ಧರ್ಮಕೇಂದ್ರಕ್ಕೆ ಸೇರಿದ ಪಿ.ಎಫ್.ಜೋಸೆಫ್ ಹಾಗೂ ಗ್ಲಾಡಿಯಸ್ ದಂಪತಿಯರ ಪುತ್ರ ಫ್ರಾನ್ಸಿಸ್ ಜಾಕ್ಸನ್ ಗೋವಾ ರಾಜ್ಯದ ವಿನ್ಸೆಂಟ್ ಪೊಲೈಟಿನ್ ಸಭೆಗೆ ಯಾಜಕ ತರಬೇತಿಗಾಗಿ ಸೇರ್ಪಡೆಗೊಂಡಿದ್ದರು. ತಾ. 11 ರಂದು ಸಂತ ಅಂತೋಣಿ ದೇವಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡರು. ಮೈಸೂರು ಪ್ರಾಂತ್ಯ ಸೇರಿದಂತೆ ಮೂವತ್ತಕ್ಕೂ ಮಿಕ್ಕಿ ಧರ್ಮಗುರುಗಳು ಪಾಲ್ಗೊಂಡಿದರು. ವಿವಿಧ ಭಾಗಗಳಿಂದ ಆಗಮಿಸಿದ ಕನ್ಯಾಸ್ತ್ರೀಯರು ಹಾಗೂ ಕ್ರೈಸ್ತ ಭಾಂದವರು ಪಾಲ್ಗೊಂಡಿದರು.