ಮೂರ್ನಾಡು, ಮೇ. 12: ಇಲ್ಲಿಗೆ ಸನಿಹದ ಹೊದ್ದೂರುವಿನ ಕೋರನ ಅಯ್ಯಣ್ಣ ಅವರಿಗೆ ಸೇರಿದ ಎರಡು ಹಾಲು ಕರೆಯುವ ಹಸುಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಮೂರ್ನಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾ. 10ರಂದು (ಮೊದಲ ಪುಟದಿಂದ) ರಾತ್ರಿ ಕೋರನ ಅಯ್ಯಣ್ಣ ಅವರು ತಮ್ಮ ಎರಡು ಹಾಲು ಕರೆಯುವ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದರು. 11ರಂದು ಬೆಳಿಗ್ಗೆ ಹಾಲು ಕರೆಯಲು ಕೊಟ್ಟಿಗೆ ಬಂದಾಗ, ಎರಡೂ ಹಸುಗಳನ್ನು ಕಟ್ಟಿದ ಹಗ್ಗ ಕತ್ತರಿಸಿ, ಕೊಟ್ಟಿಗೆಯಿಂದ ಕದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸಂಶಯಿತರನ್ನು ಠಾಣೆಗೆ ಕರೆಯಿಸಿ, ವಿಚಾರಣೆ ನಡೆಸಿದ್ದಾರೆ. ರಸ್ತೆ ಬದಿಗಳಲ್ಲಿರುವ ಕೊಟ್ಟಗೆಯಿಂದ ಗೋವುಗಳನ್ನು ಕಳವು ಮಾಡುತ್ತಿರುವ ಬಗ್ಗೆ ಈ ಭಾಗದ ಜನತೆಯಲ್ಲಿ ಭಯದ ವಾತಾವರಣ ಮೂಡಿದೆ.