ಶ್ರೀಮಂಗಲ, ಮೇ 13: ಕೊಡಗು ಹಿಂದೂ ಮಲೆಯಾಳಿ ಸಮಾಜದ ಆಶ್ರಯದಲ್ಲಿ ಹಿಂದೂ ಕಪ್ ಕ್ರಿಕೆಟ್ ಪಂದ್ಯಾಟವನ್ನು ತಾ. 17, 18, 19 ರಂದು ಶ್ರೀಮಂಗಲ ಸಮೀಪ, ಕಾಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿನ್ನರ್ಸ್ ತಂಡಕ್ಕೆ ರೂ. 22,222 ಹಾಗೂ ರನ್ನರ್ಸ್ ತಂಡಕ್ಕೆ ರೂ. 11,111 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವದು ಎಂದು ಪಂದ್ಯಾವಳಿಯ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.