ಸುಂಟಿಕೊಪ್ಪ, ಮೇ 12: ಚಿಕ್ಲಿಹೊಳೆ ಜಲಾಶಯದಲ್ಲಿ ಈಜುವ ಸಲುವಾಗಿ ನೀರಿಗೆ ಇಳಿದಿದ್ದ ಇಬ್ಬರು ನೀರುಪಾಲಾಗಿರುವ ದುರ್ಘಟನೆ ಇಂದು ಸಂಜೆ ಸಂಭವಿಸಿದೆ. ಕಂಬಿಬಾಣೆಯ ನಿವಾಸಿ ಸುಬ್ರಮಣಿ ಎಂಬವರ ಪುತ್ರ ನಂದೀಶ (16) ಹಾಗೂ ಕೊಡಗರಳ್ಳಿಯ ನಿವಾಸಿ ಸಹದೇವನ್ ಎಂಬವರ ಪುತ್ರ ಪವನ್ (19) ಮೃತ ದುರ್ದೈವಿಗಳಾಗಿದ್ದಾರೆ. ಇಂದು ಸಂಜೆ 5 ಗಂಟೆ ಸುಮಾರಿಗೆ ಈ ಇಬ್ಬರು, ಮತ್ತಿಬ್ಬರು ಸ್ನೇಹಿತರೊಂದಿಗೆ ಚಿಕ್ಲಿಹೊಳೆಯ ಹಿನ್ನೀರಿನಲ್ಲಿ ಸ್ನಾನಕ್ಕೆ ತೆರಳಿದ ಸಂದರ್ಭ ಆಕಸ್ಮಿಕವಾಗಿ ನೀರುಪಾಲಾಗಿದ್ದು, ಈ ವೇಳೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಗಮನಿಸಿ ಬೊಬ್ಬೆ ಹಾಕಿದ್ದಾರೆ. ಅಲ್ಲದೆ ತೆಪ್ಪದ ಸಹಾಯದಿಂದ ಸಂತೋಷ್, ಸುಧಿ ಹಾಗೂ ದೇವರಾಜ್, ಅವರನ್ ಎಂಬವರು ಇವರಿಬ್ಬರ ಶವಗಳನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಘಟನೆ ಸಂಬಂಧ ಸುಂಟಿಕೊಪ್ಪ, ಠಾಣಾಧಿಕಾರಿ

(ಮೊದಲ ಪುಟದಿಂದ) ಜಯರಾಂ ಹಾಗೂ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯೊಂದಿಗೆ; ಘಟನೆ ಸಂಬಂಧ ಮೊಕದ್ದಮೆ ದಾಖಲಿಸಿಕೊಳ್ಳುವ ಮೂಲಕ ಮುಂದಿನ ಕ್ರಮ ಕೈಗೊಂಡಿದ್ದಾರೆ.